` ಯಂಗ ರೆಬಲ್‍ಸ್ಟಾರ್ ಚಿತ್ರಕ್ಕೆ ಮೇ 28ಕ್ಕೆ ಮುಹೂರ್ತ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
abhishek's amar movie launch date fixed
Ambareesh, Abhishek, Sumalatha Image

ಮೇ 29ಕ್ಕೆ ಅಂಬರೀಷ್ ಹುಟ್ಟುಹಬ್ಬ. ಅದೇ ದಿನ ಅವರ ಮಗ ಅಭಿಷೇಕ್ ಅಂಬರೀಷ್ ಅಭಿನಯದ ಅಮರ್ ಚಿತ್ರಕ್ಕೆ ಮುಹೂರ್ತ ಮಾಡಬೇಕು ಅನ್ನೋದು ನಿರ್ಮಾಪಕ ಸಂದೇಶ್ ನಾಗರಾಜ್ ಕನಸಾಗಿತ್ತು. ಆದರೆ, ಆ ದಿನ ಮಂಗಳವಾರ. ಹೀಗಾಗಿ ಹಿಂದಿನ ದಿನವೇ ಸಣ್ಣದೊಂದು ಪೂಜೆ ಮಾಡಲು ನಿರ್ಧರಿಸಿದ್ದಾರೆ ಸಂದೇಶ್ ನಾಗರಾಜ್.

ಅಮರ್ ಚಿತ್ರದ ಫಸ್ಟ್ ಲುಕ್ ಸಿದ್ಧವಾಗಿದ್ದು, ಚಿತ್ರದ ಪೋಸ್ಟರ್ ಡಿಸೈನ್ ರೆಡಿಯಾಗಿದೆ. ಮೈನಾ, ಸಂಜು ವೆಡ್ಸ್ ಗೀತಾ ಖ್ಯಾತಿಯ ನಾಗಶೇಖರ್ ಚಿತ್ರದ ನಿರ್ದೇಶಕ. ತಾನ್ಯಾ ಹೋಪ್ ಚಿತ್ರಕ್ಕೆ ನಾಯಕಿ. ಸಿನಿಮಾ ಪೋಸ್ಟರ್‍ನಲ್ಲಿ ಅಭಿಷೇಕ್‍ಗೆ ಯಂಗ್ ರೆಬಲ್‍ಸ್ಟಾರ್ ಅನ್ನೋ ಬಿರುದನ್ನೂ ನೀಡಲಾಗಿದೆ.

ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ಅಭಿಷೇಕ್, ಸಿನಿಮಾವನ್ನೇ ತನ್ನ ಆದ್ಯತೆ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ನಾನು ಹುಟ್ಟಿದ್ದು, ಕಷ್ಟಪಟ್ಟಿದ್ದು, ಇಷ್ಟಪಟ್ಟಿದ್ದು, ಕಲಿತಿದ್ದು ಎಲ್ಲವೂ ಸಿನಿಮಾಗಾಗಿಯೇ. ಹೀಗಾಗಿ ಸಿನಿಮಾ ಬಿಟ್ಟು ಬೇರೆ ಕ್ಷೇತ್ರಗಳ ಬಗ್ಗೆ ನನಗೆ ಆಸಕ್ತಿಯಿಲ್ಲ ಎಂದಿದ್ದಾರೆ ಅಭಿಷೇಕ್ ಅಂಬರೀಷ್.

ಅಂದಹಾಗೆ ಮತ್ತೊಮ್ಮೆ ಹೇಳಿಬಿಡ್ತೇವೆ ಕೇಳಿ. ಅಮರ್‍ನಾಥ್ ಅನ್ನೋದು ಅಂಬರೀಷ್ ಅವರ ಮೂಲ ಹೆಸರು.ಅಂಬರೀಷ್ ಅನ್ನೋ ನಾಮಕರಣ ಮಾಡಿದ್ದು ಪುಟ್ಟಣ್ಣ ಕಣಗಾಲ್. ಅಂಬರೀಷ್ ಚಕ್ರವ್ಯೂಹ, ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್, ಅಮರ್‍ನಾಥ್ ಸೇರಿದಂತೆ ತಮ್ಮ ಹಲವು ಚಿತ್ರಗಳಲ್ಲಿ ಅಮರ್ ಹೆಸರಿನ ಪಾತ್ರವನ್ನೇ ಮಾಡಿದ್ದಾರೆ. ಈಗ ಅವರ ಮಗನ ಮೊದಲ ಸಿನಿಮಾ ಟೈಟಲ್ ಅಮರ್. 

Londonalli Lambodara Movie Gallery

Rightbanner02_butterfly_inside

Panchatantra Movie Gallery