ಹರ್ಷಿಕಾ ಪೂಣಚ್ಚ ಅಭಿನಯದ ಚಿಟ್ಟೆ, ವಿಶೇಷವಾಗಿ ಗಮನ ಸೆಳೆದಿರುವ ಚಿತ್ರ. ಹರ್ಷಿಕಾ ಗೃಹಿಣಿಯಾಗಿ ನಟಿಸಿದ್ದಾರೆ ಅನ್ನೋದು ಚಿತ್ರದ ಹೈಲೈಟ್. ಮೈಯ್ಯೆಲ್ಲ ಚಿಟ್ಟೆಯಂತೆ ಬಣ್ಣ ಹಚ್ಚಿಕೊಂಡಿದ್ದ ಹರ್ಷಿಕಾ ಅವರ ಫೋಟೋ ಎಲ್ಲರ ಗಮನ ಸೆಳೆದಿತ್ತು.
ಚಿಟ್ಟೆ ಚಿತ್ರದ ಮೇಲೆ ಹರ್ಷಿಕಾ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ಚಿಟ್ಟೆಗೀಗ ಗೋಲ್ಡನ್ ಟಚ್ ಸಿಕ್ಕಿದೆ. ಚಿಟ್ಟೆಯ ಹಾಡುಗಳ ಬಿಡುಗಡೆಗೆ ಸ್ವತಃ ಗೋಲ್ಡನ್ ಸ್ಟಾರ್ ಗಣೇಶ್ ಬರುತ್ತಿರುವುದು ವಿಶೇಷ. ಅದನ್ನು ಖುಷಿಯಾಗಿ ಹೇಳಿಕೊಂಡಿರುವ ಹರ್ಷಿಕಾ, ಚಿಟ್ಟೆಯಂತೆಯೇ ಆಗಿಬಿಟ್ಟಿದ್ದಾರೆ. ಹಾಡುಗಳ ಬಿಡುಗಡೆ ಇದೇ 25 ರಂದು.