` ಮಾನ್ವಿತಾ ಪೇಂಯ್ಟಿಂಗ್ ಕೂಡಾ ಮಾಡ್ತಾರೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
manvitha draws sketches of rajkumar and rajanikanth
Manvitha Harish Image

ಟಗರು ಪುಟ್ಟಿ ಮಾನ್ವಿತಾ ಪೇಂಯ್ಟಿಂಗ್ ಕೂಡಾ ಮಾಡ್ತಾರೆ. ಹೌದು, ಟಗರು ಚಿತ್ರದ ಈ ಕೆಂಡಸಂಪಿಗೆ, ಫ್ರೀ ಇದ್ದಾಗ ಬೇರೆ ಬೇರೆ ಹವ್ಯಾಸಗಳನ್ನಿಟ್ಟುಕೊಂಡಿದ್ದಾರೆ. ಓದುವುದು ಅವರ ನೆಚ್ಚಿನ ಹವ್ಯಾಸ. ಇದರ ಜೊತೆ ಪೇಂಯ್ಟಿಂಗ್, ಡ್ರಾಯಿಂಗ್ ಹವ್ಯಾಸವೂ ಇದೆ. 

ಹೀಗೆಯೇ ಇತ್ತೀಚೆಗೆ ಡಾ.ರಾಜ್ ಕುಮಾರ್ ಹಾಗೂ ರಜನಿಕಾಂತ್ ಚಿತ್ರಗಳನ್ನು ಡ್ರಾಯಿಂಗ್ ಮಾಡಬೇಕು ಎನಿಸಿದೆ. ತಕ್ಷಣ ಬ್ರಷ್ ತೆಗೆದುಕೊಂಡಿದ್ದಾರೆ. ಬ್ಲೂ ಇಂಕ್ ಪೆನ್‍ನಲ್ಲಿ ಒಮ್ಮೆಯೂ ಅಳಿಸದೆ ಇಬ್ಬರೂ ಸ್ಟಾರ್ ನಟರ ಚಿತ್ರವನ್ನು ಅರಳಿಸಿದ್ದಾರೆ.

ಅನಿಮೇಷನ್ ಕೋರ್ಸ್ ಮಾಡಿರೋದ್ರಿಂದ ಪೆನ್ ಹಾಗೂ ಪೆನ್ಸಿಲ್ ಸ್ಕೆಚ್ ಮಾಡೋದು ಗೊತ್ತು. ಡ್ರಾಯಿಂಗ್ ಮಾಡೋದೆಂದರೆ ನನಗೆ ಬಹಳ ಇಷ್ಟ. ಅದು ನನ್ನ ಬಾಲ್ಯವನ್ನು ನೆನಪಿಸುತ್ತೆ ಎಂದು ಹೇಳಿಕೊಂಡಿದ್ದಾರೆ ಮಾನ್ವಿತಾ.

Padarasa Movie Gallery

Kumari 21 Movie Gallery