` ಸಂಚಾರಿ ವಿಜಯ್ ಈಗ ಪೋಲಿ ವಿಜಯ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sanchari vijay is naughty boy in padarasa
Sanchari Vijay In Padarasa

ಸಂಚಾರಿ ವಿಜಯ್ ಅಂದ್ರೆ, ಎಲ್ಲರ ನೆನಪಿಗೆ ಬರೋದು ರಾಷ್ಟ್ರೀಯ ಪ್ರಶಸ್ತಿ. ಅವರೂ ಅಷ್ಟೆ, ನಾನು ಅವನಲ್ಲ ಅವಳು ಚಿತ್ರದಿಂದ ಬಂದ ಖ್ಯಾತಿಯನ್ನು ಉತ್ತಮ ಚಿತ್ರಗಳಲ್ಲಿ ನಟಿಸುವ ಮೂಲಕ ಉಳಿಸಿಕೊಂಡವರು. ಆದರೆ, ಈಗ ಪರಮಪೋಲಿಯಾಗಿಬಿಟ್ಟಿದ್ದಾರೆ. 

ಸಂಚಾರಿ ವಿಜಯ್ ನಟಿಸುತ್ತಿರುವ ಹೊಸ ಸಿನಿಮಾ ಪಾದರಸ... ಟ್ಯಾಗ್‍ಲೈನ್ ಏನ್ ಗೊತ್ತಾ..? ಇದು ಖಾಲಿ ಚಿತ್ರವಲ್ಲ.. ಪೋ..ಪೋ..ಪೋಲಿ ಚಿತ್ರ ಅಂತಾ. ಚಿತ್ರದ ಡೈಲಾಗುಗಳಲ್ಲಿ ಪೋಲಿತನವಿದೆ ಅನ್ನೋದನ್ನು ಒಪ್ಪಿಕೊಳ್ಳೋ ನಿರ್ದೇಶಕರು, ಡೈಲಾಗುಗಳು ತರ್ಲೆ ನನ್ಮಗ, ಉಪೇಂದ್ರ, ಮಠ, ನೀರ್‍ದೋಸೆ ಚಿತ್ರಗಳು ಕೊಟ್ಟ ಕಿಕ್ ಕೊಡಲಿವೆ ಅಂತಾರೆ. ಚಿತ್ರದ ಡೈರೆಕ್ಟರ್ ಹೃಷಿಕೇಶ್ ಜಂಬಗಿ.

ಹುಟ್ಟು ಅನಾಥ ಹುಡುಗರು ಸಮಾಜದಲ್ಲಿ ಹೇಗೆ ಬದುಕುತ್ತಾರೆ ಅನ್ನೋದು ಚಿತ್ರದ ಕಥೆಯಂತೆ. ಐಷಾರಾಮಿ ಜೀವನಕ್ಕಾಗಿ ಅಡ್ಡದಾರಿ ಹಿಡಿಯುವ ಹುಡುಗರು ಹಾಗೇಕೆ ಮಾಡಿದರು ಅನ್ನೋದೇ ಸಿನಿಮಾ ಕಥೆ.

Chemistry Of Kariyappa Movie Gallery

BellBottom Movie Gallery