ರಾಜ ಲವ್ಸ್ ರಾಧೆ ಸಿನಿಮಾದ ಕಥೆ, ವಿಜಯ್ ರಾಘವೇಂದ್ರಗೆ ಹೊಸ ಅನುಭವ. ವಿಜಯ್ ರಾಘವೇಂದ್ರ ಚಿತ್ರದಲ್ಲಿ ಮೆಕಾನಿಕ್ ಆಗಿ ಕಾಣಿಸಿಕೊಂಡಿದ್ದರೆ, ರಾಧೆಯಾಗಿ ನಟಿಸಿರುವ ರಾಧಿಕಾ ಪ್ರೀತಿ ರಾಧೆಯಾಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಪ್ರೀತಿಗೆ ಇದು 2ನೇ ಸಿನಿಮಾ. ಎಸ್.ನಾರಾಯಣ್ ನಿರ್ದೇಶನದ ಪಂಟ ಚಿತ್ರದಲ್ಲಿ ನಾಯಕಿಯಾಗಿದ್ದ ರಾಧಿಕಾ ಪ್ರೀತಿ, ಇಲ್ಲಿ ಶ್ರೀಮಂತ ಮನೆತನದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಮೆಕ್ಯಾನಿಕ್ ರಾಜನಿಗೂ, ಕೋಟ್ಯಧೀಶ್ವರಿ ರಾಧೆಗೂ ಪ್ರೀತಿ ಹುಟ್ಟುತ್ತೆ. ಇಂತಹ ಸಿನಿಮಾಗಳು ಹಲವಾರು ಬಂದಿವೆಯಾದರೂ, ನಿರ್ದೇಶಕರ ನಿರೂಪಣೆ ಡಿಫರೆಂಟಾಗಿದೆ. ಕಾಮಿಡಿ ಟ್ರ್ಯಾಕ್‍ನಲ್ಲೇ ಸಾಗುವ ಕಥೆ ಪ್ರೇಕ್ಷಕರಿಗೆ ಕಚಗುಳಿಯಿಡುತ್ತಾ ಹೋಗುತ್ತೆ. ಹೀಗಾಗಿ ಚಿತ್ರವನ್ನು ಒಪ್ಪಿಕೊಂಡೆ ಅಂತಾರೆ ವಿಜಯ್ ರಾಘವೇಂದ್ರ. ಸಿನಿಮಾ ಈ ವಾರ ತೆರೆಗೆ ಬರುತ್ತಿದೆ.