ಬೇಜಾರಾದ್ರೆ ಚಡ್ಡಿಯೊಳಗೆ ಇರುವ ಬಿಟ್ಕೊಳ್ಳಿ.. ಇಲ್ಲಾಂದ್ರೆ ಮುಚ್ಕೊಂಡು ಮನೇಲಿ ಕೂತ್ಕೊಳ್ಳಿ.. ಹೀಗೆ ಶುರುವಾಗುತ್ತೆ ಹಾಡು. ಇದು ಲೌಡ್ಸ್ಪೀಕರ್ ಸಿನಿಮಾದ್ದು. ಮಳೆ ಹಾಗೂ ಧೈರ್ಯಂ ಚಿತ್ರಗಳ ನಂತರ ಶಿವತೇಜಸ್ ನಿರ್ದೇಶಿಸಿರುವ ಸಿನಿಮಾ ಲೌಡ್ಸ್ಪೀಕರ್. ಈಹಾಡು ಹಾಡಿರೋದು ಚಂದನ್ ಶೆಟ್ಟಿ. ಸಂಗಿತ ಹರ್ಷವರ್ಧನ್ ಅವರದ್ದು.
ಅಂದಹಾಗೆ ಈ ಹಾಡು ಚಿತ್ರದಲ್ಲಿ ಇಲ್ಲ. ಚಿತ್ರದ ಪ್ರಮೋಷನ್ಗಾಗಿಯೇ ಸೃಷ್ಟಿಸಿದ ಹಾಡಿದು. ಜಗತ್ತಿನ ಮೋಸ್ಟ್ ಡೇಂಜರಸ್ ಈ ಚಿತ್ರದ ಕಥೆಯಂತೆ. ನಿಮಗೆಲ್ಲ ಗೊತ್ತಿರೋದೆ..ಆದರೆ, ಸದ್ಯಕ್ಕೆ ಸಸ್ಪೆನ್ಸ್ ಜಾರಿಯಲ್ಲಿರಲಿ ಅಂತಿದೆ ಚಿತ್ರತಂಡ.
ಅಂದಹಾಗೆ ಚಿತ್ರದ ಪ್ರಮೋಷನ್ಗಾಗಿ ಸೃಷ್ಟಿಸಿದ ಈ ಹಾಡು ಈಗ ವೈರಲ್ ಆಗಿಬಿಟ್ಟಿದೆ. ಸಿನಿಮಾ ಮಾಡ್ತಾ ಮಾಡ್ತಾ ಐಡಿಯಾ ಬಂತು. ಅಭಿಷೇಕ್ ಅವರು ಒಂದೊಳ್ಳೆ ಸಾಹಿತ್ಯ ಬರೆದಿದ್ದರು. ಅದು ಸೂಟ್ ಆಗ್ತಾ ಇತ್ತು. ನಿರ್ಮಾಪಕರಿಗೂ ತಿಳಿಸಿ ಹಾಡು ಶೂಟ್ ಮಾಡಿಸಿದೆವು. ಈಗ ಹಿಟ್ ಆಗಿದೆ ಅನ್ನೋ ಖುಷಿಯಿದೆ ಅಂತಿದೆ ಸಿನಿಮಾ ಟೀಂ.