` ನೈಜ ಕಥೆಯೇ ಕಟ್ಟುಕಥೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kattukathe is real story
KattuKathe Movie Image

ಕಟ್ಟುಕಥೆ.. ಇದು ಸಿನಿಮಾದ ಹೆಸರು. ಆದರೆ ಸಿನಿಮಾದಲ್ಲಿರುವ ಕಥೆ, ನೈಜಘಟನೆಯನ್ನಾಧರಿಸಿದ್ದು. ಚಿತ್ರದ ಅಡಿಬರಹವೇ ಅದು.. ಎ ರಿಯಲ್ ಸ್ಟೋರಿ. ನಿರ್ದೇಶಕರ ಗೆಲುವು ಇರುವುದೇ ಇಲ್ಲಿ. ಕಟ್ಟುಕಥೆ.. ಎ ರಿಯಲ್ ಸ್ಟೋರಿ ಅನ್ನೋ ಬರಹದಲ್ಲಿ. ಹಾಗಾದರೆ, ಚಿತ್ರದ ಕಥೆ ಎಂಥದ್ದು.. ಕುತೂಹಲಕ್ಕೆ ಉತ್ತರ ಸಿಗೋದು ಸಿನಿಮಾದಲ್ಲಿ ಮಾತ್ರ.

ಚಿತ್ರದ ಹೀರೋ ಕಿವುಡ. ಅವನೊಬ್ಬ ಹುಡುಗಿಯನ್ನು ಪ್ರೀತಿಸ್ತಾನೆ. ಅವಳು ಹೇಳೋದೊಂದು, ಇವನು ಅರ್ಥ ಮಾಡಿಕೊಳ್ಳೋದೇ ಮತ್ತೊಂದು. ಆಗ ಸೃಷ್ಟಿಯಾಗುವ ಅವಾಂತರಗಳೇ ಚಿತ್ರದ ಕಥೆ. ಅದರ ನಡುವೆ ಒಂದು ಮರ್ಡರ್ ಮಿಸ್ಟರಿ.

ಚಿತ್ರಕ್ಕೆ ಮಹದೇವ ಮೈಸೂರು ನಿರ್ಮಾಪಕರು. ಮೂಲತಃ ಸ್ವೀಟ್ ವ್ಯಾಪಾರಿಗಳು, ಈಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ರಾಜ್‍ಪ್ರವೀಣ್ ನಿರ್ದೇಶನದ ಸಿನಿಮಾಗೆ ಸೂರ್ಯ ನಾಯಕರಾದರೆ, ಸ್ವಾತಿ ಕೊಂಡೆ ನಾಯಕಿ. ರಾಜೇಶ್ ನಟರಂಗ ಚಿತ್ರದಲ್ಲಿ ಇನ್ಸ್‍ಪೆಕ್ಟರ್ ಆಗಿದ್ದಾರೆ. ಕಟ್ಟುಕಥೆ ಕೇಳೋಕೆ, ನೋಡೋಕೆ.. ಇನ್ನೊಂದು ಜೂನ್ 15ರ ತನಕ ಕಾಯಿರಿ.

 

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery