` ಕಿಚ್ಚ ಸುದೀಪ್ ಇಷ್ಟವಾಗೋದೇ ಇಂಥ ಕಾರಣಕ್ಕೆ. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep's simplicity during election campaigning
Sudeep's Simplicity

ಕಿಚ್ಚ ಸುದೀಪ್ ಸರಳತೆಗೆ ಇನ್ನೊಂದು ಹೆಸರು. ಹತ್ತಿರವಾದವರು ಸುದೀಪ್ ಸ್ನೇಹಕ್ಕೆ, ಸರಳತೆಗೆ ಶರಣಾಗುತ್ತಾರೆ. ಸುದೀಪ್‍ರ ಅಂತಹುದೇ ಇನ್ನೊಂದು ಸರಳತೆಗೆ ಸಾಕ್ಷಿಯಾಗಿದ್ದು ಈ ಎಲೆಕ್ಷನ್ ಪ್ರಚಾರ.

ಚಿತ್ರದುರ್ಗ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪರ ಪ್ರಚಾರ ನಡೆಸುತ್ತಿದ್ದ ಸುದೀಪ್ ಹೊಟ್ಟೆ ಹಸಿದಿತ್ತು. ನೇರವಾಗಿ ಕಣ್ಣಿಗೆ ಕಂಡ ರಸ್ತೆಯ ಬದಿಯಲ್ಲಿಯೇ ಇದ್ದ ಹೋಟೆಲ್‍ವೊಂದಕ್ಕೆ ಹಓದ ಸುದೀಪ್, ಆರಾಮಾಗಿ ಊಟ ಮಾಡಿ, ಟೀ ಕುಡಿದು ಬಂದಿದ್ದಾರೆ.

ಹೋಟೆಲ್‍ನ ಮಾಲಕಿಗೆ 10000 ರೂ. ನೀಡಿದ ಸುದೀಪ್, ನನಗೆ ಹೊಟ್ಟೆ ಹಸಿದಿತ್ತು, ಹೋಟೆಲ್‍ನಲ್ಲಿ ಅಡುಗೆಯೂ ಬೊಂಬಾಟ್ ಆಗಿತ್ತು ಎಂದು ಖುಷಿಗೊಂಡಿದ್ದಾರೆ.

ಹಸಿದಾಗ ಅನ್ನ ಕೊಟ್ಟವರೇ ದೇವರು ಅನ್ನೋದು ಸುದೀಪ್ ಅವರ ಮಾತಿನ ತಾತ್ಪರ್ಯ. ಹೋಟೆಲ್‍ನವರು ಸುದೀಪ್ ನೋಡಿ ಥ್ರಿಲ್ಲಾದರೆ, ಸುದೀಪ್ ಊಟ ಮಾಡಿ ಖುಷಿಯಾದರು. ಸುದೀಪ್ 

Geetha Movie Gallery

Damayanthi Teaser Launch Gallery