ಕನ್ನಡದಲ್ಲಿ ಬೆನ್ನು ಬೆನ್ನಿಗೇ ಹಿಟ್ ಚಿತ್ರಗಳನ್ನು ಕೊಟ್ಟ ರಶ್ಮಿಕಾ, ಸದ್ಯಕ್ಕೆ ಕನ್ನಡದಲ್ಲಿ ದರ್ಶನ್ ಜೊತೆ ನಟಿಸುತ್ತಿದ್ದಾರೆ. ಯಜಮಾನ ಚಿತ್ರದಲ್ಲಿ ರಶ್ಮಿಕಾ, ದರ್ಶನ್‍ಗೆ ನಾಯಕಿ. ಇದರ ಜೊತೆ ಅವರು ಎರಡು ತೆಲುಗು ಚಿತ್ರಗಳಿಗೆ ಕಮಿಟ್ ಆಗಿದ್ದಾರೆ.
ಅಕ್ಕಿನೇನಿ ನಾಗಾರ್ಜುನ್ ಹಾಗೂ ನಾನಿ ನಟಿಸುತ್ತಿರುವ ಮಲ್ಟಿಸ್ಟಾರ್ ಚಿತ್ರದಲ್ಲಿ ರಶ್ಮಿಕಾ ನಾಯಕಿ. ನಾನಿಗೆ ನಾಯಕಿಯಾಗಿರುವ ರಶ್ಮಿಕಾಗೆ, ನಾಗಾರ್ಜುನ ಎದುರು ನಟಿಸುವ ಹಲವು ದೃಶ್ಯಗಳಿವೆಯಂತೆ. ಇದರ ಜೊತೆ ವಿಜಯ್ ದೇವರಕೊಂಡ ಚಿತ್ರದಲ್ಲಿ ರಶ್ಮಿಕಾ ಕ್ರೀಡಾಪಟುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ ಚಲೋ ಚಿತ್ರದ ಮೂಲಕ ತೆಲುಗಿನಲ್ಲಿಯೂ ಯಶಸ್ಸು ಕಂಡಿರುವ ರಶ್ಮಿಕಾ, ತೆಲುಗಿನಲ್ಲಿ 2 ಸಿನಿಮಾಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಿದೆ.
ಇದರ ಜೊತೆಗೆ ಅಕ್ಕಿನೇನಿ ಪುತ್ರ ನಿಖಿಲ್ ಜೊತೆ ನಟಿಸೋಕೆ ಆಫರ್ ಇದೆ. ಫೈನಲ್ ಆಗಿಲ್ಲ. ಒಟ್ಟಿನಲ್ಲಿ ರಶ್ಮಿಕಾ, ಕನ್ನಡ ಹಾಗೂ ತೆಲುಗು ಚಿತ್ರರಂಗಗಳೆರಡರಲ್ಲೂ ಬ್ಯುಸಿಯಾಗುತ್ತಿದ್ದಾರೆ.