` ದಿ ವಿಲನ್ ಡಬ್ಬಿಂಗ್ ಶುರು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
the villain dubbing starts
The Villain Movie Image

ಕಿಚ್ಚ ಸುದೀಪ್ ಮತ್ತು ಶಿವರಾಜ್‍ಕುಮಾರ್ ಒಟ್ಟಿಗೇ ನಟಿಸುತ್ತಿರುವ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ ದಿ ವಿಲನ್. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದ ಡಬ್ಬಿಂಗ್ ಈಗ ಶುರುವಾಗಿದೆ. ಹಾಗೆಂದು ಶೂಟಂಗ್ ಮುಗಿದಿದೆ ಎಂದುಕೊಳ್ಳಬೇಡಿ. ಇನ್ನೂ ಎರಡು ಹಾಡುಗಳ ಶೂಟಿಂಗ್ ಕೆಲಸ ಬಾಕಿಯಿದೆ.

ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಯ ಮೇಲೆ ಬರಲಿದೆ. ರಿಲೀಸ್ ಡೇಟ್ ಫಿಕ್ಸ್ ಮಾಡಿಕೊಂಡೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಲಾಗಿದೆ. ಎಲ್ಲವೂ ನಿರೀಕ್ಷೆಯಂತೆಯೇ ಆದರೆ, ಆಗಸ್ಟ್ 24ರಂದು ಚಿತ್ರ ತೆರೆಗೆ ಬರಲಿದೆ.

ಅಂದಹಾಗೆ.. ಸುದೀಪ್ ಅವರೇ ಹೀರೋ ಆಗಿರುವ ಚಿತ್ರವೊಂದು ತೆರೆಯ ಮೇಲೆ ಒಂದು ವರ್ಷ 2 ತಿಂಗಳಾಗಿದೆ.

Shivarjun Movie Gallery

Popcorn Monkey Tiger Movie Gallery