ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ಅಡಿಷನ್ ಮೂಲಕವೇ ನಾಯಕಿಯನ್ನು ಆಯ್ಕೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರಕ್ಕೆ ಹೊಸ ಮುಖ ಬೇಕು. ಅಭಿನಯಿಸುವ ಪ್ರತಿಭೆ ಇರಬೇಕು. ಪರಂವಾ ಸ್ಟುಡಿಯೋಸ್ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.
ನಾಯಿ ಮತ್ತು ಮನುಷ್ಯನ ನಡುವಿನ ಬಾಂಡಿಂಗ್, ಚಿತ್ರದ ಕಥೆ. ರಕ್ಷಿತ್ ಅವರ ಬಳಿಯೇ ಕೆಲಸ ಮಾಡುತ್ತಿದ್ದ ಕಿರಣ್ ರಾಜ್, ಚಿತ್ರದ ನಿರ್ದೇಶಕ. ಚಾರ್ಲಿ ಅನ್ನೋದು ನಾಯಿಯ ಹೆಸರಾದರೆ, 777 ಅನ್ನೋದು ಅದರ ಲೈಸೆನ್ಸ್ ನಂಬರ್.
ಸ್ಸೋ.. ಇನ್ನೇಕೆ ತಡ.. This email address is being protected from spambots. You need JavaScript enabled to view it. ಗೆ ಒಂದು ಮೇಯ್ಲ್ ಮಾಡಿ. ನಿಮಗೆ ನೆನಪಿರಲಿ.. ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಚಿತ್ರಕ್ಕೆ ಆಯ್ಕೆಯಾಗಿದ್ದೂ ಕೂಡಾ ಇಂತಹ ಅಡಿಷನ್ ಮೂಲಕವೇ.