` ಕನ್ನಡದ ಅರ್ಜುನ್ ರೆಡ್ಡಿ ಡಾಲಿ ಧನಂಜಯ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
will dhananjay act in kannada remake of arjun reddy
Arjun Reddy Move Image, Dhananjay

ಅರ್ಜುನ್ ರೆಡ್ಡಿ, ಕಳೆದ ವರ್ಷ ತೆಲುಗಿನಲ್ಲಿ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡ ಸಿನಿಮಾ. ಹಸಿಹಸಿ ಪ್ರೇಮಕಥೆಯಿದ್ದ ಚಿತ್ರವದು. ಮಡಿವಂತರು ಮುಖ ಮುಚ್ಚಿಕೊಳ್ಳುವಂತ ದೃಶ್ಯಗಳಿದ್ದ ಚಿತ್ರದಲ್ಲಿ, ಅಷ್ಟೇ ಅದ್ಭುತವಾದ ಸಂದೇಶವೂ ಇತ್ತು. ಹೀಗಾಗಿಯೇ ಈ ಚಿತ್ರದ ರೀಮೇಕ್ ರೈಟ್ಸ್ ಈಗ ರಾಕ್‍ಲೈನ್ ವೆಂಕಟೇಶ್ ಬಳಿ ಇದೆ. ಅರ್ಜುನ್ ರೆಡ್ಡಿ ಚಿತ್ರದಿಂದ ವಿಜಯ್ ದೇವರಕೊಂಡ ಎಂಬ ಹೀರೋ, ಟಾಲಿವುಡ್‍ನಲ್ಲಿ ಸ್ಟಾರ್ ಆಗಿದ್ದು ವಿಶೇಷ.

ಆದರೆ, ಕನ್ನಡದಲ್ಲಿ ಅರ್ಜುನ್ ರೆಡ್ಡಿ ಯಾರಾಗ್ತಾರೆ ಅನ್ನೋ ಕುತೂಹಲ ಇನ್ನೂ ಅಂತಿಮಗೊಂಡಿಲ್ಲ. ಯಶ್ ನಟಿಸುತ್ತಾರೆ ಎಂಬ ಸುದ್ದಿಯಿತ್ತಾದರೂ, ಯಶ್ ಒಪ್ಪಲಿಲ್ಲ ಎಂಬ ಸುದ್ದಿಯೂ ಹಿಂದೆಯೇ ಬಂದಿತ್ತು. ನಂತರ ಕೇಳಿ ಬಂದ ಹೆಸರು ಡಲಿ ಧನಂಜಯ್ ಅವರದ್ದು. ಟಗರು ಚಿತ್ರದ ಡಾಲಿ ಪಾತ್ರ ನೋಡಿದವರು ಅರ್ಜುನ್ ರೆಡ್ಡಿಯನ್ನು ಕಲ್ಪಿಸಿಕೊಂಡಿದ್ದರೆ ಅಚ್ಚರಿಯಿಲ್ಲ.

ಆದರೆ, ರಾಕ್‍ಲೈನ್ ಹೇಳೋದೇ ಬೇರೆ. ಆ ಚಿತ್ರದ ನಿರ್ದೇಶನಕ್ಕೆ ಒಬ್ಬ ಸಮರ್ಥ ನಿರ್ದೇಶಕನ ಹುಡುಕಾಟದಲ್ಲಿದ್ದೇವೆ. ಇನ್ನೂ ನಿರ್ದೇಶಕರು ಫೈನಲ್ ಆಗಿಲ್ಲ. ಅದಾದ ಮೇಲೆ ಹೀರೋ ಆಯ್ಕೆ. ಸದ್ಯಕ್ಕೆ ಯಾವುದೇ ಹೆಸರು ಅಂತಿಮಗೊಂಡಿಲ್ಲ ಎಂದಿದ್ದಾರೆ ರಾಕ್‍ಲೈನ್.

Geetha Movie Gallery

Upendra Birthday Celebration Gallery