ಅಪ್ಪ ಅಮ್ಮ ಪ್ರೀತಿ. ಇದು ವಿನಯ್ ರಾಜ್ಕುಮಾರ್ ಅಭಿನಯದ ಹೊಸ ಸಿನಿಮಾ. ಇನ್ನೂ ಶೂಟಿಂಗ್ ಶುರುವಾಗಿಲ್ಲ. ಚಿತ್ರದ ಪೋಸ್ಟರ್ನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಆರಂಭದಲ್ಲಿ ಚಿತ್ರಕ್ಕೆ
ವಿನಯ್ ರಾಜ್ಕುಮಾರ್ಗೆ ಖುಷ್ಬೂ ಅಮ್ಮನಾಗಿ ಬರುತ್ತಿದ್ದಾರೆ ಎನ್ನಲಾಗಿತ್ತು. ಅದಕ್ಕೂ ಮೊದಲು ಆ ಪಾತ್ರಕ್ಕೆ ರಾಧಿಕಾ ಶರತ್ ಕುಮಾರ್ ಬರಲಿದ್ದಾರೆ ಎನ್ನಲಾಗಿತ್ತು. ಕೊನೆಗೆ ಖುಷ್ಬೂ ಅವರನ್ನು ಫೈನಲ್ ಮಾಡಿದ್ದ ಚಿತ್ರತಂಡ, ಚಿತ್ರದ ಪೋಸ್ಟರ್ನ್ನೂ ಬಿಡುಗಡೆ ಮಾಡಿತ್ತು.
ಈ ಕುರಿತಂತೆ ಚಿತ್ರಲೋಕದ ಸುದ್ದಿಗೆ ಟ್ವಿಟರ್ನಲ್ಲೇ ಪ್ರತಿಕ್ರಿಯೆ ನೀಡಿರುವ ಖುಷ್ಬೂ, ನಾನಿನ್ನೂ ಒಪ್ಪಿಕೊಂಡಿಲ್ಲ. ನನ್ನ ಅಂತಿಮ ನಿರ್ಧಾರವನ್ನು ಇನ್ನೂ ತಿಳಿಸಿಲ್ಲ ಎಂದಿದ್ದಾರೆ. ಹಾಗಾದರೆ, ಖುಷ್ಬೂ ಅವರು ಒಪ್ಪಿಗೆ ನೀಡುವ ಮುನ್ನವೇ ಚಿತ್ರತಂಡ ಆತುರಕ್ಕೆ ಬಿದ್ದಿದ್ದು ಏಕೆ..? ಪೋಸ್ಟರ್ ಬಿಡುಗಡೆ ಮಾಡಿದ್ದು ಏಕೆ..? ಚಿತ್ರತಂಡವೇ ಉತ್ತರಿಸಬೇಕು.
ಮಾನಸ ರಾಧಾಕೃಷ್ಣನ್ ನಾಯಕಿಯಾಗಿರು ಚಿತ್ರಕ್ಕೆ, ಶ್ರೀಧರ್ ನಿರ್ದೇಶನವಿದೆ. ಎಸ್.ಎಲ್.ಎನ್. ಮೂರ್ತಿ ನಿರ್ಮಾಪಕರು. ಚಿತ್ರದ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕಾಟ ನಡೆಯುತ್ತಿದೆ. ಸದ್ಯಕ್ಕೆ ತಾಯಿಯೇ ಫೈನಲ್ ಆಗಿಲ್ಲ.