ಬಕಾಸುರ ಚಿತ್ರ ಇದ್ಯಲ್ಲ, ಇದು ನಿರ್ದೇಶಕ ನವನೀತ್ಗೆ 2ನೇ ಸಿನಿಮಾ ಅಷ್ಟೆ. ಮೊದಲ ಚಿತ್ರ ಕರ್ವ. ಅದು ಸೂಪರ್ ಹಿಟ್ ಆದ ಚಿತ್ರ. 2ನೇ ಚಿತ್ರದಲ್ಲೂ ಅದೇ ತಂಡ ಮತ್ತೆ ಒಟ್ಟುಗೂಡಿದೆ. ಹೊಸದಾಗಿ ಆ ತಂಡಕ್ಕೆ ಸೇರಿಕೊಂಡಿರೋದು ಕ್ರೇಜಿಸ್ಟಾರ್ ರವಿಚಂದ್ರನ್.
ಒಬ್ಬ ಹೊಸ ನಿರ್ದೇಶಕನ 2ನೇ ಸಿನಿಮಾದಲ್ಲೇ ರವಿಚಂದ್ರನ್ ಅಂಥಹವರಿಗೆ ಡೈರೆಕ್ಟ್ ಮಾಡೋದು ಚಾಲೆಂಜಿಂಗ್ ಅಲ್ವಾ ಅಂತಾ ನಿರ್ದೇಶಕರನ್ನ ಕೇಳಿದ್ರೆ ಅದು ಚಾಲೆಂಜಿಂಗ್ ಅಲ್ಲ, ಥ್ರಿಲ್ಲಿಂಗ್ ಅಂತಾರೆ.
ಒಂದ್ಸಲ ಕಥೆ ಫೈನಲ್ ಮಾಡಿದ್ಮೇಲೆ ರವಿ ಸರ್ ಜೊತೆ ಹಲವಾರು ಮೀಟಿಂಗ್ಗಳಾದವು. ಪ್ರತಿ ಮೀಟಿಂಗ್ನಲ್ಲೂ ರವಿ ಸರ್ ಕಂಫರ್ಟ್ ಎನಿಸುತ್ತಾ ಹೋದರು. ನಮ್ಮನ್ನು ಹೊಸಬರು ಎಂದು ನೋಡಲೇ ಇಲ್ಲ. ಕೆಲವು ಸಲಹೆಗಳನ್ನು ಕೊಡುತ್ತಾರೆ. ಆದರೆ, ಆಯ್ಕೆಯನ್ನು ನಮಗೇ ಬಿಡುತ್ತಾರೆ. ರವಿ ಸರ್ ಜೊತೆ ಕೆಲಸ ಮಾಡುವುದೇ ಒಂದು ಅದ್ಭುತ ಅನುಭವ ಅಂತಾರೆ ನವನೀತ್.
ರೋಹಿತ್ ಶೆಟ್ಟಿ, ರವಿಚಂದ್ರನ್, ಕಾವ್ಯಾ ಗೌಡ ಪ್ರಮುಖ ಪಾತ್ರದಲ್ಲಿರುವ ಬಕಾಸುರ ಶುಕ್ರವಾರ ಥಿಯೇಟರ್ನಲ್ಲಿರುತ್ತೆ. ಜಸ್ಟ್ ಥ್ರಿಲ್.