` ಜಗ್ಗೇಶ್‍ಗೆ ಟಿಕೆಟ್ - ಮೊದಲು ಹೇಳಿದ್ದು ಯಾರು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh yet again feels the blessings of divine power
Jaggesh Image

ನವರಸ ನಾಯಕ ಜಗ್ಗೇಶ್, ಮತ್ತೊಮ್ಮೆ ಚುನಾವಣಾ ಅಖಾಡಕ್ಕಿಳಿಯುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಜಗ್ಗೇಶ್ ಈ ಬಾರಿ ಅಭ್ಯರ್ಥಿ. ರಾಜ್ ಹುಟ್ಟುಹಬ್ಬದಂದೇ ನಾಮಪತ್ರ ಸಲ್ಲಿಸುತ್ತಿರುವುದು ವಿಶೇಷ. ಆದರೆ, ಚುನಾವಣೆಗೂ ಮುನ್ನ ಜಗ್ಗೇಶ್ ರಾಜಕೀಯ, ಸ್ಪರ್ಧೆಯ ಸಹವಾಸವೇ ಬೇಡ ಎನ್ನುವಂತಿದ್ದವರು. ವೈರಾಗ್ಯ ಜೀವನದ ಹತ್ತಿರದಲ್ಲಿದ್ದೇನೆ ಎನ್ನುತ್ತಿದ್ದ ಜಗ್ಗೇಶ್, ಟಿಕೆಟ್ ಆಕಾಂಕ್ಷಿಯೂ ಆಗಿರಲಿಲ್ಲ.

ಇದಕ್ಕೂ ಮುನ್ನ ಜಗ್ಗೇಶ್ ಮಂತ್ರಾಲಯಕ್ಕೆ ಹೋಗಿದ್ದರಂತೆ. ಮನಸ್ಸಿಗೆ ತೋಚಿದಾಗಲೆಲ್ಲ ಮಂತ್ರಾಲಯಕ್ಕೆ ಹೋಗಿ ರಾಯರ ಎದುರು ಕೂರುವುದು ಜಗ್ಗೇಶ್ ಅವರಿಗೆ ಅಭ್ಯಾಸ. ಇತ್ತೀಚೆಗೆ ಹಾಗೆ ಹೋಗಿದ್ದಾಗ, ಅಲ್ಲಿನ ಸ್ವಾಮಿಗಳು ನಿಮಗೆ ಅಧಿಕಾರ ಪ್ರಾಪ್ತಿಯಾಗಲಿದೆ ಎಂದಿದ್ದರಂತೆ. ಆಗ ನಾನು ಚುನಾವಣೆಗೆ ನಿಲ್ಲುತ್ತಿಲ್ಲ, ಹೇಗೆ ಸಾಧ್ಯ ಎಂದು ಜಗ್ಗೇಶ್ ಪ್ರಶ್ನಿಸಿದಾಗ ಸ್ವಾಮಿಗಳು ನಕ್ಕಿದ್ದರಂತೆ.

ಆಗ ನನಗೆ ಅರ್ಥವಾಗಿರಲಿಲ್ಲ. ಎಲ್ಲವೂ ರಾಯರ ಆಶೀರ್ವಾದ. ರಾಯರು ಬಯಸಿದಂತೆ ನಡೆಯುತ್ತೇನೆ ಎಂದಿದ್ದಾರೆ ಜಗ್ಗೇಶ್. ಅಂದಹಾಗೆ ಜಗ್ಗೇಶ್ ನಾಮಪತ್ರ ಸಲ್ಲಿಸುತ್ತಿರುವುದು ಅವರ ಆರಾಧ್ಯ ದೈವ ಡಾ.ರಾಜ್‍ಕುಮಾರ್ ಹುಟ್ಟುಹಬ್ಬದ ದಿನ ಎನ್ನುವುದು ಇನ್ನೊಂದು ವಿಶೇಷ.

 

Yajamana Movie Gallery

Bazaar Movie Gallery