ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೆಟ್‍ನಲ್ಲಿದ್ರೆ, ನಗು ತುಂಬಿಕೊಂಡಿರುತ್ತೆ. ಮುಖ ಊದಿಸಿಕೊಂಡು ಸೀರಿಯಸ್ ಆಗಿರಲ್ಲ. ಸದಾ ಎಲ್ಲರನ್ನೂ ಮಾತನಾಡಿಸುತ್ತಾ, ನಗುತ್ತಾ.. ನಗಿಸುತ್ತಾ ಇರುತ್ತಾರೆ. ಇದು ರಶ್ಮಿಕಾ ಮಂದಣ್ಣ ಅವರು ಹೇಳಿರೋ ಮಾತು.
ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್. ಮೊದಲು ಕಥೆ ಇಷ್ಟವಾಯ್ತು. ನಂತರ, ದರ್ಶನ್, ನಿರ್ಮಾಪಕರಾದ ಶೈಲಜಾನಾಗ್, ನಿರ್ದೇಶಕ ಪಿ.ಕುಮಾರ್.. ಹೀಗೆ ಒಳ್ಳೆಯ ತಂಡ ಇರುವ ಚಿತ್ರ. ಹಾಗಾಗಿ ಚಿತ್ರವನ್ನು ಒಪ್ಪಿಕೊಂಡೆ ಎಂದು ಹೇಳಿಕೊಂಡಿದ್ದಾರೆ ರಶ್ಮಿಕಾ.
ಸದ್ಯಕ್ಕೆ ಯಜಮಾನ ಬಿಟ್ಟರೆ, ಬೇರ್ಯಾವುದೇ ಕನ್ನಡ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿಲ್ಲ. ಬೇರೆ ಯಾವ ಚಿತ್ರವನ್ನು ಒಪ್ಪಿಕೊಂಡೂ ಇಲ್ಲ. ಕೆಲವು ಚಿತ್ರಗಳ ಮಾತುಕತೆ ನಡೆದಿದೆಯಾದರೂ ಫೈನಲ್ ಆಗಿಲ್ಲ ಎಂದು ತಿಳಿಸಿದ್ದಾರೆ ರಶ್ಮಿಕಾ ಮಂದಣ್ಣ.