` ಸಾಗುವ ದಾರಿಯಲಿ ಬದುಕಿನ ಚಿಲಿಪಿಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
saguva dariyalli special
Saguva Dariyalli Movie Image

ಸಾಗುವ ದಾರಿಯಲಿ.. ಚಿತ್ರದಲ್ಲಿರುವುದು ನಮ್ಮ ಬದುಕು. ನಿಮ್ಮ ಬದುಕು. ಚಿತ್ರದ ಹೀರೋ ಅನೂಪ್ ಸಾ.ರಾ.ಗೋವಿಂದು. ಅವರಿಗೆ ಜೋಡಿಯಾಗಿರುವುದು ಪವಿತ್ರಾ ಗೌಡ. ಸುದೀರ್ಘ ವಿರಾಮದ ನಂತರ ಪವಿತ್ರಾ ಗೌಡ ಅವರ ಸಿನಿಮಾವೊಂದು ತೆರೆಕಾಣುತ್ತಿರುವುದು. ಇನ್ನು ಚಿತ್ರದ ಹೈಲೈಟ್ ದೇವರಾಜ್.

ಡಿಫರೆಂಟ್ ಸೈನಿಕನ ಪಾತ್ರದಲ್ಲಿ ನಟಿಸಿರುವ ದೇವರಾಜ್, ಹಲವು ವರ್ಷಗಳ ನಂತರ ಯೋಧನ ಯೂನಿಫಾರ್ಮ್ ತೊಟ್ಟಿದ್ದಾರೆ. ಹೀರೋ ಅನೂಪ್ ಸಾ.ರಾ.ಗೋವಿಂದು ತಂದೆಯ ಪಾತ್ರದಲ್ಲಿ ನಟಿಸಿರುವ ದೇವರಾಜ್, ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕನಷ್ಟೇ ಪ್ರಮುಖ ಪಾತ್ರ ದೇವರಾಜ್ ಅವರದ್ದು.

ಶಿವಶಂಕರ್ ನಿರ್ದೇಶನದ ಸಿನಿಮಾ, ಇದೇ ವಾರ ತೆರೆಗೆ ಬರುತ್ತಿದೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲ ಸೇರಿದಂತೆ ಹಾಸ್ಯ ಕಲಾವಿದರ ಸಂಗಮವೇ ಚಿತ್ರದಲ್ಲಿದೆ. 

Matthe Udbhava Trailer Launch Gallery

Maya Bazaar Pressmeet Gallery