ಬಕಾಸುರ.. ಮಹಾಭಾರತದಲ್ಲಿ ಭೀಮನಿಂದ ಕೊಲ್ಲಲ್ಪಡುವ ರಾಕ್ಷಸನ ಹೆಸರು. ಅಂತಾದ್ದೊಂದು ಹೆಸರಿನ ಸಿನಿಮಾದಲ್ಲಿ ರವಿಚಂದ್ರನ್ ಇದ್ದಾರೆ. ನೆಗೆಟಿವ್ ಶೇಡ್ ಅಂತೆ. ಇನ್ನು ರೋಹಿತ್ ಕೂಡಾ ಇದ್ದಾರೆ. ಅವರು ಕೂಡಾ ಹೀರೋ. ಈ ಇಬ್ಬರಲ್ಲಿ ಬಕಾಸುರ ಯಾರು..? ಈ ಪ್ರಶ್ನೆಯನ್ನು ಚಿತ್ರತಂಡದ ಯಾರಿಗೇ ಕೇಳಿದರೂ ಅವರು ಕೊಡೋ ಉತ್ತರ ಒಂದೇ. ಸಿನಿಮಾ ನೋಡಿ ಅನ್ನೋದು.
ಚಿತ್ರದ ನಾಯಕಿ ಕಾವ್ಯ ಗೌಡ ಇದಕ್ಕೆ ಹೊರತಲ್ಲ. ಚಿತ್ರದಲ್ಲಿ ಕಾವ್ಯ ಅವರದ್ದೂ ಲಾಯರ್ ಪಾತ್ರ. ರೋಹಿತ್ಗೆ ಅಸಿಸ್ಟೆಂಟ್. ವಾದ ಮಾಡುವ ದೃಶ್ಯಗಳು ಕಡಿಮೆ. ಆದರೆ, ನನ್ನ ಪಾತ್ರಕ್ಕೊಂದು ಹೈಲೈಟ್ ಇದೆ. ನನ್ನನ್ನು ಈಗ ಎಲ್ಲರೂ ದೃಷ್ಟಿ, ದೀಪ್ತಿ (ಕಾವ್ಯ ಅಭಿನಯಿಸಿರುವ ಧಾರಾವಾಹಿ ಪಾತ್ರಗಳು) ಅಂತಾ ಕರೀತಾರೆ. ಆದರೆ, ಸಿನಿಮಾ ರಿಲೀಸ್ ಆದ ಮೇಲೆ ಎಲ್ಲರೂ ನನ್ನನ್ನು ಬಕಾಸುರ ಕಾವ್ಯ ಅಂತಾರೆ. ಅಷ್ಟು ಕಾನ್ಫಿಡೆನ್ಸ್ ನನಗಿದೆ ಅಂತಾರೆ ಕಾವ್ಯ.