` ಅನಂತ್ ಮಾತಿಗೆ ಓಕೆ ಎಂದ ಜಯಣ್ಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ananthnag is backbone in hottegagi genu battegagi
Ananth Nag In Hottegagi Genu Batter=gagi

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್‍ನಾಗ್, ತಾವು ನಟಿಸುವ ಚಿತ್ರಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಹೊಸದೇನಲ್ಲ. ಅಂತಹ ವಿಶೇಷ ಕಾಳಜಿಯನ್ನು ಅನಂತ್‍ನಾಗ್, ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಚಿತ್ರಕ್ಕೆ ತೋರಿಸಿದ್ದಾರೆ. ಹೊಸಬರ ಅದರಲ್ಲೂ ಪ್ರಯೋಗಾತ್ಮಕ ಚಿತ್ರಗಳ ಬಿಡುಗಡೆ ಸುಲಭವಲ್ಲ. ವಿತರಕರು ಸಿಗುವುದೇ ಕಷ್ಟ. ಹೀಗಿರುವಾಗ ಅನಂತ್‍ನಾಗ್, ಸ್ವತಃ ವಿತರಕ ಜಯಣ್ಣ ಅವರ ಜೊತೆ ಮಾತನಾಡಿ, ಚಿತ್ರವನ್ನೊಮ್ಮೆ ನೋಡುವಂತೆ ಕೇಳಿಕೊಂಡಿದ್ದಾರೆ. ಅನಂತ್‍ನಾಗ್ ಹೇಳಿದ್ದಕ್ಕೆ ಚಿತ್ರವನ್ನು ನೋಡಿದ ಜಯಣ್ಣ, ಚಿತ್ರವನ್ನು ಮೆಚ್ಚಿಕೊಂಡಿರುವುದಷ್ಟೇ ಅಲ್ಲ, ವಿತರಣೆಯ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದಾರೆ.

ಚಿತ್ರದ ಆರಂಭದಿಂದಲೂ ಅನಂತ್ ಸರ್, ಇದೇ ರೀತಿ ಸಪೋರ್ಟ್ ಮಾಡಿದ್ದಾರೆ. ಈಗ ನಮ್ಮ ಚಿತ್ರದ ಬಿಡುಗಡೆ ಜವಾಬ್ದಾರಿಯನ್ನು ಜಯಣ್ಣ ತೆಗೆದುಕೊಳ್ಳುವ ಮೂಲಕ, ನಮ್ಮ ಸಿನಿಮಾ ಬಿಡುಗಡೆಯನ್ನು ಸುಲಭ ಮಾಡಿಕೊಟ್ಟಿದ್ದಾರೆ ಎಂದಿದ್ದಾರೆ ನಿರ್ದೇಶಕ ನರೇಂದ್ರ ಬಾಬು.

ಅನಂತ್‍ನಾಗ್, ರಾಧಿಕಾ ಚೇತನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿನಿಮಾ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ. ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.