Rambo-2 ಚಿತ್ರ ರಿಲೀಸ್‍ಗೆ ರೆಡಿಯಾಗಿರುವ ಈ ಹೊತ್ತಿನಲ್ಲಿ ಇನ್ನೊಂದು ಸೀಕ್ರೆಟ್ ಬಯಲು ಮಾಡಿದೆ ಚಿತ್ರತಂಡ. ಚಿತ್ರದಲ್ಲಿ ಐಂದ್ರಿತಾ ಧಮ್ ಹೊಡೆದಿದ್ದಾರೆ. ಅರ್ಥಾತ್.. ಧಮ್ ಮಾರೋ ಧಮ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶರಣ್ ಅಭಿನಯದ ಚಿತ್ರದಲ್ಲಿ ಶುಭಾ ಪೂಂಜಾ, ಶ್ರುತಿ ಹರಿಹರನ್, ಸಂಚಿತಾ ಪಡುಕೋಣೆ, ಭಾವನಾ ರಾವ್ ಹಾಗೂ ಮಯೂರಿ ಒಂದು ಹಾಡಿನಲ್ಲಿ ಅತಿಥಿಗಳಾಗಿ ಬಂದು ಹೋಗ್ತಾರೆ. ಆದರೆ, ಇನ್ನೊಂದು ಹಾಡಿನಲ್ಲಿ ಐಂದ್ರಿತಾ ಕೂಡಾ ಶರಣ್ ಜೊತೆ ಹೆಜ್ಜೆ ಹಾಕಿದ್ಧಾರೆ.
ಅದು ಧಮ್ ಮಾರೋದು ಧಮ್ ಹಾಡಿಗೆ. ಐಂದ್ರಿತಾ ಸ್ಪೆಷಲ್ ಸಾಂಗುಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೆಂದೇ ಹೇಳಬಹುದೇನೋ.. ಈ ಹಿಂದೆ ಪ್ರೇಮ್ ಅಡ್ಡದಲ್ಲಿ ಬಸಂತಿ.. ಹಾಡಿಗೆ ಹೆಜ್ಜೆ ಹಾಕಿದ್ದರು ಐಂದ್ರಿತಾ. ಅಲ್ಲದೆ ಚಂದನ್ ಶೆಟ್ಟಿಯವರ ಮೂರೇ ಮೂರು ಪೆಗ್ಗಿಗೆ ಹಾಡಿನಲ್ಲೂ ಐಂದ್ರಿತಾ ಇದ್ದರು. ಈಗ Rambo-2 ಚಿತ್ರದಲ್ಲಿ ಧಮ್ ಮಾರೋ ಧಮ್ ಹಾಡಿಗೆ ನಡು ಬಳುಕಿಸಿದ್ದಾರೆ ಐಂದ್ರಿತಾ.
ಅಂದಹಾಗೆ ಈ ಧಮ್ ಮಾರೋ ಧಮ್ ಹಾಡು ಹಾಡಿರುವ ಹಿನ್ನೆಲೆ ಗಾಯಕಿ ಆದಿತಿ. ಆಕೆ ಅರುಣ್ ಸಾಗರ್ ಮಗಳು.