ರಾಕಿಂಗ್ ಸ್ಟಾರ್ ಯಶ್ ಅಂದ್ರೆ, ಡೈಲಾಗ್‍ಗಳಿಗೆ ಬರವೇ ಇರೋದಿಲ್ಲ. ಇನ್ನು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್. ಈ ಇಬ್ಬರ ಕಾಂಬಿನೇಷನ್ನಿನ ಕೆಜಿಎಫ್, ಭರ್ಜರಿ ನಿರೀಕ್ಷೆ ಹುಟ್ಟಿಸಿರುವಾಗಲೇ, ಯಶ್‍ರ ಆ ಡೈಲಾಗ್ ಹವಾ ಸೃಷ್ಟಿಸಿದೆ
ರಕ್ತದ ವಾಸನೆ ಕಂಡ್ರೆ ಬೇಜಾನ್ ಮೀನುಗಳು ಒಟ್ಟಿಗೇ ಬಂದ್ ಬಿಡ್ತವೆ. ಆದರೆ, ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನು ಬೇಟೆಯಾಡೋ ತಿಮಿಂಗಿಲದ್ದು ಅಂತಾ.. ಇದು ಯಶ್ ಡೈಲಾಗ್.
ಇದಕ್ಕೆ ಮುಂಚೆ ಇದೇ ಚಿತ್ರದ ಇನ್ನೊಂದು ಡೈಲಾಗ್‍ನ್ನು ಸ್ವತಃ ಯಶ್ ಬಹಿರಂಗಪಡಿಸಿದ್ರು. ಇನ್ಮೇಲಿಂದ ಅವರಪ್ಪ ನನ್ ಮಾವ, ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ ಚೆನ್ನಾಗ್ ನೋಡ್ಕಳ್ರೋ, ಚೆನ್ನಾಗ್ ನೋಡ್ಕಳಿ ಅನ್ನೋ ಡೈಲಾಗ್ ಬಹಿರಂಗವಾಗಿತ್ತು.
ಈಗ 2ನೇ ಡೈಲಾಗ್ ಹೊರಬಿದ್ದಿದೆ. ಹೊಂಬಾಳೆ ಫಿಲ್ಸ್ಮ್ ನಿರ್ಮಿಸುತ್ತಿರುವ ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕರು. 5 ಭಾಷೆಗಳಲ್ಲಿ ರಿಲೀಸ್ ಆಗಲಿರುವ ಚಿತ್ರದಲ್ಲಿರೋದು 80ರ ದಶಕದ ಕಥೆ. ಅಷ್ಟನ್ನು ಬಿಟ್ಟರೆ, ಬೇರ್ಯಾವುದೇ ಸೀಕ್ರೆಟ್ ಬಹಿರಂಗವಾಗಿಲ್ಲ.