` ತಮಿಳು ನಟಿಗೆ ಕನ್ನಡ ಕಲಿಸಿದ ದಿಗಂತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
katheyondhu shuruvagidhe
Pooja, Diganth Image

ದೂದ್‍ಪೇಡ ದಿಗಂತ್ ಅಭಿನಯದ ಕಥೆಯೊಂದು ಶುರುವಾಗಿದೆ ಚಿತ್ರ ಚಿತ್ರೀಕರಣ ಹಂತದಲ್ಲಿದೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಪೂಜಾ ದೇವಾರಿಯಾ. ಕನ್ನಡದವರಲ್ಲ. ತಮಿಳಿನಲ್ಲಿ ಈಗಾಗಲೇ 4 ಸಿನಿಮಾ ಮಾಡಿರುವ ಪೂಜಾ ಅವರ ನಾಲ್ಕಕ್ಕೆ ನಾಲ್ಕೂ ಚಿತ್ರಗಳಿಗೆ ಪ್ರಶಸ್ತಿ ಬಂದಿರುವುದು ವಿಶೇಷ. ತಾಯಿ ಕನ್ನಡದವರಾದರೂ ಕನ್ನಡ ಗೊತ್ತಿಲ್ಲದೆ ಬೆಳೆದಿದ್ದ ಪೂಜಾಗೆ ಈಗ ದಿಗಂತ್ ಕನ್ನಡ ಕಲಿಸಿದ್ದಾರೆ.

ಚಿತ್ರದಲ್ಲಿ ನಾಯಕ & ನಾಯಕಿ ಮಧ್ಯೆ ಉದ್ದುದ್ದ ಡೈಲಾಗ್‍ಗಳಿವೆ. ಅವುಗಳನ್ನು ಹೇಳಬೇಕು ಎಂದರೆ, ಕನ್ನಡ ಕಲಿಯುವುದು ಅನಿವಾರ್ಯ. ಹೀಗಾಗಿ ಕನ್ನಡ ಕಲಿತೆ ಎಂದು ಹೇಳಿಕೊಂಡಿದ್ದಾರೆ ಪೂಜಾ ದೇವರಿಯಾ. ಸೆನ್ನಾ ಹೆಗ್ಡೆ ನಿರ್ದೇಶನದ ಚಿತ್ರ ತಂಡದಲ್ಲಿ ತಂತ್ರಜ್ಞರ ವಿಭಾಗದಲ್ಲಿ ಹೆಚ್ಚು ಹೆಚ್ಚು ಮಹಿಳೆಯರೇ ಇರುವುದು ವಿಶೇಷ.

Padarasa Movie Gallery

Kumari 21 Movie Gallery