ಕಿಚ್ಚ ಸುದೀಪ್, ಕನ್ನಡದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೇ ಸಲ್ಲುವ ಸ್ಟಾರ್ ನಟ. ಹೀಗಾಗಿ ಸುದೀಪ್ ಅಭಿಮಾನಿಗಳು ದೇಶ ವಿದೇಶದಲ್ಲೆಲ್ಲ ಇದ್ದಾರೆ. ಈಗ ನಾವು ಹೇಳ್ತಿರೋದು ಜಪಾನ್‍ನ ಅಂತಹ ಒಬ್ಬ ಕಿಚ್ಚನ ಅಭಿಮಾನಿಯ ಬಗ್ಗೆ.
ಈತನ ಹೆಸರು ಮೋಹಿಶ್‍ಮೊಟೊ. ಕಿಚ್ಚ ಸುದೀಪ್‍ಗೆ ಈತ ಎಷ್ಟರಮಟ್ಟಿಗಿನ ಅಭಿಮಾನಿಯೆಂದರೆ, ಸುದೀಪ್‍ರ ಪ್ರತಿ ಚಿತ್ರದ ಪೋಸ್ಟರ್‍ನ್ನು ತನ್ನ ಕುಂಚದಲ್ಲಿ ಅರಳಿಸಿದ್ದಾನೆ. ರನ್ನ, ವೀರಮದಕರಿ, ಬಾಹುಬಲಿಯ ಸುಲ್ತಾನ, ಹೆಬ್ಬುಲಿ.. ಹೀಗೆ ಸುದೀಪ್ ಅಭಿನಯದ ಹಲವು ಚಿತ್ರಗಳ ಪಾತ್ರಗಳು ಮೋಹಿಶ್‍ಮೋಟೋ ಕೈಯ್ಯಲ್ಲಿ ರೇಖಾಚಿತ್ರಗಳಾಗಿವೆ.
ರನ್ನ ಚಿತ್ರದಲ್ಲಿ ಸುದೀಪ್‍ರನ್ನು ಬಬ್ಬರ್ ಶೇರ್ ಎಂದು ಹೊಗಳುವ ಹಾಡಿದೆ. ಸುದೀಪ್ ಕುರಿತ ರೇಖಾಚಿತ್ರಗಳ ಸರಣಿಗೆ ಬಬ್ಬರ್ ಶೇರ್ ಎಂದೇ ಹೆಸರಿಟ್ಟಿದ್ದಾರೆ ಮೋಹಿಶ್‍ಮೋಟೊ. ಈ ಸರಣಿಯಲ್ಲಿ ಇನ್ನಷ್ಟು ರೇಖಾಚಿತ್ರಗಳನ್ನು ಬರೆಯುವುದಾಗಿಯೂ ತಿಳಿಸಿದ್ದಾರೆ.
ಮುದ್ದಾದ ರೇಖಾಚಿತ್ರಗಳನ್ನು ನೋಡಿದ ಸುದೀಪ್, ಅಭಿಮಾನಿಯ ಅಭಿಮಾನಕ್ಕೆ ಶರಣಾಗಿಬಿಟ್ಟಿದ್ದಾರೆ.