` ಫ್ಯಾಮಿಲಿ ಪವರ್ ಗ್ರೇಟ್ ಆಗಿದ್ದು ಈ ಕಾರಣಕ್ಕೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
family power's heartfelt episode
Family Power Reality Show

ಫ್ಯಾಮಿಲಿ ಪವರ್. ಕಲರ್ಸ್ ಕನ್ನಡ ಚಾನೆಲ್‍ಗೆ ಪುನೀತ್ ರಾಜ್‍ಕುಮಾರ್ ನಡೆಸಿಕೊಡುತ್ತಿರುವ ಕೌಟುಂಬಿಕ ರಿಯಾಲಿಟಿ ಶೋ. ಅನ್ಯೋನ್ಯವಾಗಿರುವ ಕುಟುಂಬಗಳನ್ನು ಹುಡುಕಿ, ಅವರಿಂದ ಆಟವಾಡಿಸಿ, ಗೆದ್ದವರಿಗೆ ಬಹುಮಾನ ನೀಡುವ ಕಾರ್ಯಕ್ರಮ, ಪುನೀತ್ ರಾಜ್‍ಕುಮಾರ್ ಅವರಿಂದಾಗಿಯೇ ಹಿಟ್ ಆಯಿತು. ಕಾರ್ಯಕ್ರಮ ಹಿಟ್ ಎನ್ನುವುದಕ್ಕಿಂತ ಇನ್ನೊಂದು ಹೃದಯಸ್ಪರ್ಶಿ ವಿಷಯ ಕಾರ್ಯಕ್ರಮದಲ್ಲಿದೆ. ಈ ಕಾರ್ಯಕ್ರಮ ಹಲವರ ಬಾಳು ಬೆಳಗಿದೆ.

ಕಾರ್ಯಕ್ರಮದಲ್ಲಿ ಮುಸ್ಲಿಂ ದಂಪತಿಯೊಂದು ಭಾಗವಹಿಸಿತ್ತು. ಅವರಿಗೆ ಎದುರಾಳಿಯಾಗಿದ್ದ ಕುಟುಂಬದಲ್ಲಿ ಮಗುವೊಂದರ ಚಿಕಿತ್ಸೆಗೆ ಹಣ ಬೇಕಿತ್ತು. ಈ ದಂಪತಿ ತಾವು ಗೆದ್ದ 3ಲಕ್ಷ ರೂ. ಬಹುಮಾನದ ಹಣವನ್ನು ಆ ಮಗುವಿನ ಚಿಕಿತ್ಸೆಗೆ ಕೊಟ್ಟರು.

ಅದಷ್ಟೇ ಅಲ್ಲ, ಇನ್ನೊಂದು ಶೋನದಲ್ಲಿ ಭಾಗವಹಿಸಿದ್ದವರು ತಾವು ಗೆದ್ದ ಹಣವನ್ನು ಹುತಾತ್ಮ ಯೋಧರೊಬ್ಬರ ಕುಟುಂಬಕ್ಕೆ ನೀಡಿದರು. ಹೀಗೆ ಸರಣಿಯಲ್ಲಿ ಹಲವರು ಈ ರೀತಿ ಇನ್ನೊಬ್ಬರ ಕಷ್ಟಕ್ಕೆ ನೆರವಾಗಿ, ಫ್ಯಾಮಿಲಿ ಪವರ್ ಎಂದರೆ ಏನೆಂದು ತೋರಿಸಿಕೊಟ್ಟಿದ್ದಾರೆ.

ಈಗ ರಿಯಾಲಿಟಿ ಶೋನ ಗ್ರ್ಯಾಂಡ್‍ಫೈನಲ್ ನಡೆಯುತ್ತಿದೆ. ಸೀರಿಯಲ್ ಕಲಾವಿದರು ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇವರೆಲ್ಲರೂ ಆಟವಾಡುತ್ತಿರುವುದು ಪ್ರಚೇತ್ ಎಂಬ ಪುಟ್ಟಬಾಲಕನ ಚಿಕಿತ್ಸೆಗಾಗಿ. ಶ್ರವಣದೋಷವಿರುವ ಮಗುವಿನ ಚಿಕಿತ್ಸೆಗೆ ಇನ್ನೂ ಹೆಚ್ಚು ಹಣದ ಅಗತ್ಯವಿದೆ ಎಂಬ ಕಾರಣಕ್ಕಾಗಿ ಬಹುಮಾನದ ಮೊತ್ತವನ್ನು 10ರಿಂದ 15 ಲಕ್ಷಕ್ಕೆ ಹೆಚ್ಚಿಸಿದೆ ಕಲರ್ಸ್ ಕನ್ನಡ.

ಕಿರುತೆರೆ ಶೋಗಳು ಈ ರೀತಿ ಸಮಾಜದ ಕಷ್ಟಕ್ಕೂ ಸ್ಪಂದಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಈ ರಿಯಾಲಿಟಿ ಶೋ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery