ಲವ್ಲಿಸ್ಟಾರ್ ಪ್ರೇಮ್‍ಗೆ ಪುರುಷ ಅಭಿಮಾನಿಗಳಿಗಿಂತ ಮಹಿಳಾ ಅಭಿಮಾನಿಗಳೇ ಹೆಚ್ಚು. ಅದು ಸ್ವತಃ ಪ್ರೇಮ್ ಅವರಿಗೂ ಅನುಭವಕ್ಕೆ ಬಂದಿದೆ. ಪ್ರೇಮ್ ಅವರ ಪ್ರತಿ ಚಿತ್ರ ರಿಲೀಸ್ ಆದಾಗಲೂ ಅವರ ಅಭಿಮಾನಿಗಳು ಒಂದು ಡಿಮ್ಯಾಂಡ್ ಇಡ್ತಾನೇ ಇದ್ರಂತೆ. ನಿಮ್ಮ ಸಿನಿಮಾದಲ್ಲಿ ಹೆಲ್ದೀ ರೊಮ್ಯಾನ್ಸ್ ಜಾಸ್ತಿ ಇರಲಿ ಅಂತಿದ್ರಂತೆ. ಜೊತೆಗೆ ಫೈಟು, ಮೆಲೋಡ್ರಾಮ ಇರಲಿ ಎನ್ನುತ್ತಿದ್ದರಂತೆ.
ದಳಪತಿ ಚಿತ್ರದಲ್ಲಿ ಅದೆಲ್ಲವೂ ಇದೆ. ಹೀಗಾಗಿಯೇ ಈ ಸಿನಿಮಾ ನನಗೆ ಸ್ಪೆಷಲ್ ಎನ್ನುತ್ತಿದ್ದಾರೆ ಪ್ರೇಮ್. ಪ್ರೀತಿ ಮತ್ತು ಸ್ನೇಹಕ್ಕಾಗಿ ಯಾವುದೇ ಕಷ್ಟವನ್ನಾದರೂ ಮೈಮೇಲೆ ಎಳೆದುಕೊಳ್ಳುವ ಪಾತ್ರ ದಳಪತಿಯಲ್ಲಿದೆ. ನೀವು, ನಿಮ್ಮ ಕುಟುಂಬದ ಸಮೇತ ಚಿತ್ರಮಂದಿರಕ್ಕೆ ಬಂದು ಎಂಜಾಯ್ ಮಾಡಬಹುದು ಎಂದು ಆಹ್ವಾನ ಕೊಟ್ಟಿದ್ದಾರೆ ಪ್ರೇಮ್.
ಕೃತಿ ಕರಬಂಧ ನಾಯಕಿಯಾಗಿರುವ ಸಿನಿಮಾಗೆ ಪ್ರಶಾಂತ್ ರಾಜ್ ನಿರ್ದೇಶಕ. ಇದೇ ವಾರ ರಿಲೀಸ್.