ನಾದಬ್ರಹ್ಮ ಹಂಸಲೇಖ ಅವರ ಆರೋಗ್ಯಕ್ಕೆ ಏನಾಗಿದೆ..? ಅಭಿಮಾನಿಗಳು ಆತಂಕಗೊಂಡು ಈ ಪ್ರಶ್ನೆ ಕೇಳೋಕೆ ಶುರುವಾಗಿದ್ದರು. ಆಗಿರೋದು ಇಷ್ಟು. ಕಿರುತೆರೆ ರಿಯಾಲಿಟಿ ಶೋ ಶೂಟಿಂಗ್‍ನಲ್ಲಿದ್ದ ಹಂಸಲೇಖ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಈಗಾಗಲೇ ಒಮ್ಮೆ ಲಘು ಹೃದಯಾಘಾತಕ್ಕೆ ಒಳಗಾಗಿರುವ ಕಾರಣ, ಸೆಟ್‍ನಲ್ಲಿದ್ದವರೆಲ್ಲರೂ ಗಾಬರಿಯಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.
ಹಂಸಲೇಖ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಅಭಿಮಾನಿಗಳು ಆತಂಕಗೊಂಡಿದ್ದರು. ಈ ಕುರಿತು ಹಂಸಲೇಖ ಮನೆಯವರು ಸ್ಪಷ್ಟನೆ ನೀಡಿದ್ದು, ಹಂಸಲೇಖ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಅಂದಹಾಗೆ ಹಂಸಲೇಖ ಅವರಿಗೆ ಹೃದಯಾಘಾತವಾಗಿಲ್ಲ. ಅವರು ಆರೋಗ್ಯವಾಗಿದ್ದಾರೆ.