` ಪೈಲ್ವಾನ್ ಆಗೋಕೆ ಮಗನೊಂದಿಗೆ ವಿಜಿ ಪ್ರಾಕ್ಟೀಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
duniya viji kusthi practice with his son
Kusthi Movie Image

ದುನಿಯಾ ವಿಜಿ ಅವರ ಮುಂದಿನ ಸಿನಿಮಾ ಕುಸ್ತಿಯ ಕುರಿತಾದದ್ದು. ಆ ಚಿತ್ರದಲ್ಲಿ ದುನಿಯಾ ವಿಜಿ ಕುಸ್ತಿಪಟುವಾಗಿ ನಟಿಸುತ್ತಿದ್ದಾರೆ, ಬಾಲಕನ ಪಾತ್ರದಲ್ಲಿ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ತಯಾರಿ ಆರಂಭವಾಗಿದ್ದು, ದುನಿಯಾ ವಿಜಯ್ ಈಗ ಕುಸ್ತಿಯ ಪಟ್ಟುಗಳನ್ನು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಕಾರ್ತಿಕ್ ಕಾಟೆ, ಅಪ್ಪಾಸಿ ತೇರದಾಳ ಹಾಗೂ ಬೀರೇಶ್ ಎಂಬ ರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದುನಿಯಾ ವಿಜಯ್‍ಗೆ ತರಬೇತಿ ಕೊಡುತ್ತಿದ್ದಾರೆ.

ಬಾಲ್ಯದಿಂದಲೂ ಗರಡಿ ಮನೆಯಲ್ಲಿಯೇ ಬೆಳೆದ ನನಗೆ ಕುಸ್ತಿ ಬಗ್ಗೆ ಸಿನಿಮಾ ಮಾಡಬೇಕು ಎಂಬ ಕನಸಿತ್ತು. ಇದು ಕನ್ನಡದ ಮಣ್ಣಿನ ಸೊಗಡಿನ ಸಿನಿಮಾ ಆಗಲಿದೆ ಎಂಬ ವಿಶ್ವಾಸ ವಿಜಿಯವರದ್ದು. ದುನಿಯಾ ವಿಜಿ ಜೊತೆ ಅವರ ಮಗ ಸಾಮ್ರಾಟ್ ಕೂಡಾ ಪ್ರಾಕ್ಟೀಸ್ ಮಾಡುತ್ತಿರುವುದು ವಿಶೇಷ. ಅಂದಹಾಗೆ ಚಿತ್ರದ ಕಥೆಗಾರ ಸ್ವತಃ ದುನಿಯಾ ವಿಜಯ್.

Padarasa Movie Gallery

Kumari 21 Movie Gallery