ಗೋಹತ್ಯೆ ಮಾಡೋದು ಮತ್ತು ಹೆತ್ತ ತಾಯಿಯ ತಲೆ ಹಿಡಿಯೋದು ಎರಡೂ ಒಂದೇ. ಇದು ಸೀಜರ್ ಚಿತ್ರದಲ್ಲಿನ ಒಂದು ಡೈಲಾಗ್. ಇದು ಸದ್ಯಕ್ಕೆ ವಿವಾದವಾಗಿದೆ. ಚಿತ್ರ ಬಿಡುಗಡೆ ಹೊತ್ತಿನಲ್ಲಿಯೇ ವಿವಾದದ ಕಿಡಿ ಹೊತ್ತುಕೊಂಡಿದೆ.
ಚಿತ್ರದಲ್ಲಿ ಈ ಡೈಲಾಗ್ ಹೇಳಿರುವುದು ರವಿಚಂದ್ರನ್ ಅವರ ಪಾತ್ರ. ಚಿರಂಜೀವಿ ಸರ್ಜಾ ಚಿತ್ರದ ನಾಯಕ. ಆ ಚಿತ್ರದಲ್ಲಿ ಪ್ರಕಾಶ್ ರೈ ಕೂಡಾ ಇದ್ದಾರೆ. ಹೇಳಿಕೇಳಿ ಪ್ರಕಾಶ್ ರೈ, ಗೋಹತ್ಯೆ ನಿಷೇಧದ ವಿರುದ್ಧ ಗುರುತಿಸಿಕೊಂಡಿರುವವರು. ಹೀಗಾಗಿಯೇ ಪ್ರಕಾಶ್ ರೈ ಕೂಡಾ ಈ ಡೈಲಾಗ್ ಬಗ್ಗೆ ಬೇಸರಗೊಂಡಿದ್ದಾರೆ.
ಡೈರೆಕ್ಟರ್ಗೆ ಫೋನ್ ಮಾಡಿದ್ದ ಪ್ರಕಾಶ್ ರೈ `ಏನಯ್ಯಾ, ಹೀಗಾ ಡೈಲಾಗ್ ಬರೆಯೋದು. ನಿಂಗೇನ್ ತಲೆ ಇಲ್ವಾ' ಎಂದು ಬೈದಿದ್ದಾರೆ. ವಿಷಯ ಗೊತ್ತಾದ ತಕ್ಷಣ ಫೋನ್ ಮಾಡಿ ನಿರ್ದೇಶಕರಿಗೆ ಉಗಿದೆ ಅನ್ನೋದನ್ನ ಪ್ರಕಾಶ್ ರೈ ಅವರೇ ಹೇಳಿಕೊಂಡಿದ್ದಾರೆ.
ಆದರೆ ಆ ಡೈಲಾಗ್ ಹೇಳುವ ದೃಶ್ಯದಲ್ಲಿ ನಾನಿಲ್ಲ. ಅಷ್ಟೇ ಸಮಾಧಾನ ಎಂದು ಹೇಳಿದ್ದಾರೆ ಪ್ರಕಾಶ್ ರೈ. ಇಂಥವರೆನ್ನಲ್ಲ ನಿರ್ದೇಶಕರು ಎನ್ನುವುದು ಹೇಗೆ.. ನಾನ್ಸೆನ್ಸ್ ಎಂದಿದ್ದಾರೆ ಪ್ರಕಾಶ್ ರೈ. ಚಿತ್ರದ ನಿದೇಶಕ ವಿನಯ್ ಕೃಷ್ಣ. ಪರೂಲ್ ಯಾದವ್ ಚಿತ್ರದ ನಾಯಕಿ.