ಸೀಜರ್ ಅಂದ್ರೆ ಯಾರು..? ಇತಿಹಾಸ ಅಲ್ಪಸ್ವಲ್ಪ ಗೊತ್ತಿದ್ದವರಿಗೆ ತಕ್ಷಣ ನೆನಪಿಗೆ ಬರೋದು ಜೂಲಿಯಸ್ ಸೀಸರ್ನ ಹೆಸರು. ಆತ ರೋಮನ್ ಸಾಮ್ರಾಜ್ಯದ ಸೇನಾಧಿಪತಿ.. ಸರ್ವಾಧಿಕಾರಿಯಂತೆ ಮೆರೆದಿದ್ದವನು. ಕ್ರಿ.ಪೂ.60ರಲ್ಲಿ ಬದುಕಿದ್ದವನು. ಅಂದರೆ ಕ್ರಿಸ್ತ ಹುಟ್ಟುವುದಕ್ಕೂ ಮೊದಲು. ಈಗ ಆತನ ಹೆಸರನ್ನಿಟ್ಟುಕೊಂಡು ಬರುತ್ತಿರುವುದು ಸೀಜರ್ ಸಿನಿಮಾ.
ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಮತ್ತು ರವಿಚಂದ್ರನ್ ಕಾಂಬಿನೇಷನ್ ಇದೆ. ರವಿಚಂದ್ರನ್ ಫೈನಾನ್ಷಿಯರ್ ಆದ್ರೆ, ಚಿರು ಸರ್ಜಾ ರೌಡಿ. ಪರೂಲ್ ಯಾದವ್ ನಾಯಕಿಯಾಗಿರೋ ಸಿನಿಮಾದಲ್ಲಿ ಪ್ರಕಾಶ್ ರೈ ವಿಲನ್. ಸಿನಿಮಾ ಈ ವಾರ ತೆರೆಗೆ ಬರೋಕೆ ರೆಡಿಯಾಗಿದೆ.
ಈ ಥರದ ಪಾತ್ರ ನನಗೆ ಇದೇ ಮೊದಲು. ಸಾಮಾನ್ಯವಾಗಿ ಹೀರೊಯಿಸಂನೊಂದಿಗೆ ಕಥೆಗಳು ಸಾಗಿದರೆ, ಇಲ್ಲಿ ರೌಡಿಸಂನೊಂದಿಗೆ ಕಥೆ ಸಾಗುತ್ತೆ. ನೆಗೆಟಿವ್ ಶೇಡ್ ಇರುವ ಪಾತ್ರ. ರವಿಚಂದ್ರನ್ ಜೊತೆ ನಟಿಸಿರುವ ಖುಷಿಯೂ ಇದೆ ಎಂದು ಖುಷಿ ಹಂಚಿಕೊಳ್ಳುತ್ತಿದ್ದಾರೆ ಚಿರು. ಏಪ್ರಿಲ್ 13ಕ್ಕೆ ತೆರೆಗೆ ಬರುತ್ತಿರುವ ಸಿನಿಮಾ, ಗೋಹತ್ಯೆ ಡೈಲಾಗ್ನಿಂದಲೂ ಸುದ್ದಿಯಲ್ಲಿದೆ.