ಬೆಲ್‍ಬಾಟಂ. ಬಿಡುಗಡೆಗೆ ಮುನ್ನವೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಏಕೆಂದರೆ ಚಿತ್ರದ ನಾಯಕ ರಿಷಬ್ ಶೆಟ್ಟಿ. ಅವರು ಕಿರಿಕ್ ಪಾರ್ಟಿಯಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ಡೈರೆಕ್ಟರ್. ಚಿತ್ರದ ನಿರ್ದೇಶಕ ಜಯತೀರ್ಥ. ಒಲವೇ ಮಂದಾರ ಕ್ಲಾಸಿಕ್ ಲವ್‍ಸ್ಟೋರಿ ಕೊಟ್ಟಿದ್ದ ಡೈರೆಕ್ಟರ್. ಸಿನಿಮಾದ ಬಗ್ಗೆ ಕುತೂಹಲ ಹುಟ್ಟೋಕೆ ಈ ಎರಡು ಕಾರಣಗಳು ಸಾಕು.
ಆದರೆ, ಇಂತಹ ಕುತೂಹಲಗಳ ಗುಚ್ಛಕ್ಕೆ ಇನ್ನೂ ಒಂದು ವಿಷಯ ಸೇರ್ಪಡೆಯಾಗಿದೆ. ಸಿನಿಮಾದಲ್ಲಿ ಇಬ್ಬರಲ್ಲ.. ಒಟ್ಟು ಐವರು ನಿರ್ದೇಶಕರಿದ್ದಾರೆ.
ಚಿತ್ರಕ್ಕೆ ಕಥೆ ಬರೆದಿರುವುದು ಟಿ.ಕೆ. ದಯಾನಂದ್. ಅವರೂ ನಿರ್ದೇಶಕರೇ. ಇನ್ನು ಚಿತ್ರದ ಪ್ರಮುಖ ಪಾತ್ರ ಮೋಡಿ ನಂಜಪ್ಪನಾಗಿ ನಟಿಸುತ್ತಿರುವುದು ಶಿವಮಣಿ. ಇವರ ಬಗ್ಗೆ ಹೇಳುವ ಅವಶ್ಯಕತೆಯೇ ಇಲ್ಲ. ಕನ್ನಡ ಚಿತ್ರರಂಗದ ಟ್ರೆಂಡ್‍ಸೆಟ್ಟರ್ ನಿರ್ದೇಶಕರಲ್ಲಿ ಒಬ್ಬರು ಶಿವಮಣಿ.
ಇನ್ನು ಚಿತ್ರದಲ್ಲಿ ನಿವೃತ್ತ ದರೋಡೆಕಾರನ ಪಾತ್ರದಲ್ಲಿ ನಟಿಸುತ್ತಿರುವುದು ಯೋಗರಾಜ್ ಭಟ್. ಸದ್ಯಕ್ಕೆ ಕನ್ನಡ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್.
ಇವರೆಲ್ಲರ ಸಮಾಗಮ ಬೆಲ್‍ಬಾಟಮ್‍ನಲ್ಲಿದೆ. 80ರ ದಶಕದ ಈ ಕಥೆಯಲ್ಲಿ ರಿಷಬ್ ಶೆಟ್ಟಿ ಹೀರೋ ಆಗಿದ್ದರೆ, ಹರಿಪ್ರಿಯಾ ನಾಯಕಿ. ಐವರು ಡೈರೆಕ್ಟರುಗಳು. ಕುತೂಹಲವೋ.. ಕುತೂಹಲ.