` ಮಕ್ರ್ಯುರಿ ನಿರ್ದೇಶಕರ ಸಿನಿಮಾ ಲಿಸ್ಟ್ ಕೇಳಿದ್ರೆ ಸಾಕು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mercury is directors special
Mercury Movie Image

ಮಕ್ರ್ಯುರಿ ಅನ್ನೋ ಸಂಭಾಷಣೆಯಿಲ್ಲ, ಡ್ಯಾನ್ಸ್ ಇಲ್ಲದ ಸೈಲೆಂಟ್ ಥ್ರಿಲ್ಲರ್ ಬಿಡುಗಡೆಯಾಗುತ್ತಿರುವುದು ಗೊತ್ತಿರುವ ವಿಷಯವೇ. ಏಕೆಂದರೆ, ಕರ್ನಾಟಕದಲ್ಲಿ ಈ ಚಿತ್ರವನ್ನು ಪ್ರಮೋಟ್ ಮಾಡುತ್ತಿರುವುದು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ. ಅವರು ತಮ್ಮ ಪರಂವಾ ಸ್ಟುಡಿಯೋದಿಂದ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಭುದೇವಾ ಹೀರೋ. ಆದರೆ, ಅದೆಲ್ಲಕ್ಕಿಂತ ಕುತೂಹಲ ಹುಟ್ಟಿಸಿರುವುದು ಚಿತ್ರದ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್.

ಕಾರ್ತಿಕ್ ಅವರ ಈ ಹಿಂದಿನ ಚಿತ್ರಗಳ ಹೆಸರುಗಳನ್ನೊಮ್ಮೆ ಕೇಳಿದರೆ ಸಾಕು, ಚಿತ್ರದ ಕುತೂಹಲ ನೂರ್ಮಡಿಯಾಗುತ್ತೆ. ಕಾರ್ತಿಕ್ ನಿರ್ದೇಶಿಸಿದ ಮೊದಲ ಚಿತ್ರ ಪಿಜ್ಜಾ. ಇದು ಕನ್ನಡದಲ್ಲಿ ವಿಷಲ್ ಹೆಸರಿನಲ್ಲಿ ರೀಮೇಕ್ ಆಗಿದ್ದ ಚಿತ್ರ. ಮತ್ತೊಂದು ಚಿತ್ರ ಜಿಗರ್‍ಥಂಡಾ. ಆ ಚಿತ್ರವನ್ನು ಕಿಚ್ಚ ಸುದೀಪ್ ತಮ್ಮ ಬ್ಯಾನರ್‍ನಲ್ಲಿ ರೀಮೇಕ್ ಮಾಡಿದ್ದರು. ಇರೈವಿ ಚಿತ್ರವೂ ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಈಗ ನಾಲ್ಕನೇ ಚಿತ್ರ ಮಕ್ರ್ಯುರಿ.

ಮೇಲೆ ಹೇಳಿದ ಒಂದೊಂದು ಚಿತ್ರವೂ ವಿಭಿನ್ನ ಎನ್ನುವುದೇ ಕಾರ್ತಿಕ್ ಸ್ಪೆಷಾಲಿಟಿ. ಪಿಜ್ಜಾ ಹಾರರ್ ಥ್ರಿಲ್ಲರ್. ಅತ್ಯಂತ ಕಡಿಮೆ ಬಜೆಟ್‍ನಲ್ಲಿ ತಯಾರಾಗಿ, ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದ ಸಿನಿಮಾ. ಇನ್ನು ಜಿಗರ್‍ಥಂಡಾ ರೌಡಿಸಂ ಮತ್ತು ಮಾನವೀಯತೆ ಹಿನ್ನೆಲೆಯ ಚಿತ್ರ. ಇರೈವಿ ಕಥೆಯೇ ಒಂಥರಾ ವಿಚಿತ್ರ. ಸಂಬಂಧಗಳ ಕುರಿತಾದ ಕಥೆ. ಈಗ ಮಕ್ರ್ಯುರಿ. ಇದು ಸೈಲೆಂಟ್ ಥ್ರಿಲ್ಲರ್ ಅಷ್ಟೇ ಅಲ್ಲ, ನೈಜ ಕಥೆಯೂ ಇದೆ. ಹೀಗಾಗಿಯೇ ಮಕ್ರ್ಯುರಿ ಕುತೂಹಲ ಹುಟ್ಟಿಸುತ್ತಿದೆ. 

Johnny Johnny Yes Papa Movie Gallery

Rightbanner02_statement_inside

Dalapathi Movie Gallery