` ಪ್ರಥಮ್ ಕಾರ್ ನಲ್ಲಿ ಅಧಿಕಾರಿಗಳಿಗೆ ಸಿಕ್ಕಿದ್ದೇನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pratham's car gets checked
Pratham Image

ಒಳ್ಳೆಯ ಹುಡುಗ ಪ್ರಥಮ್ ಅವರ ಕಾರ್‍ನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಅದೂ ದಾವಣಗೆರೆಯಲ್ಲಿ. ತಮ್ಮ ಕಾರ್‍ನಲ್ಲಿ ದಾವಣಗೆರೆಗೆ ಹೋಗುತ್ತಿದ್ದ ಪ್ರಥಮ್ ಅವರ ಕಾರ್‍ನ್ನು ತಡೆದ ಅಧಿಕಾರಿಗಳು ಪ್ರಥಮ್ ಅವರನ್ನು ಪ್ರೀತಿಯಿಂದಲೇ ಮಾತನಾಡಿಸಿದ್ದಾರೆ. ಕೋಡ್ ಆಫ್ ಕಂಡಕ್ಟ್ ಇರುವ ಕಾರಣ, ಕಾರ್‍ನ್ನು ಪರಿಶೀಲನೆ ಮಾಡಿದ್ದಾರೆ.

ಅಧಿಕಾರಿಗಳಿಗೆ ಸಹಕಾರ ಕೊಟ್ಟಿರುವ ಪ್ರಥಮ್, ಮೋದಿಯೇ ಬಂದರೂ ನಿಮ್ಮ ಕರ್ತವ್ಯ ನೀವು ಮಾಡಲೇಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಇನ್ನು ಪರಿಶೀಲನೆ ನಡೆಸಿದವರ ಗುಂಪಿನಲ್ಲಿ ಒಬ್ಬ ಅಧಿಕಾರಿ ಪ್ರಥಮ್ ಅವರ ಅಭಿಮಾನಿ. ಅವರ ಜೊತೆಗೊಂದು ಸೆಲ್ಫಿ ತೆಗೆದುಕೊಟ್ಟಿರುವ ಪ್ರಥಮ್ ಅಧಿಕಾರಿಗಳ ಪರಿಶೀಲನೆ, ತನಿಖೆಗೆ ಸಹಕರಿಸಿ ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ಅಲ್ಲಿಗೆ.. ಪ್ರಥಮ್ ಕಾರು ಪರಿಶೀಲನೆ ಮಾಡಿದವರಿಗೆ ಕೊನೆಗೂ ಸಿಕ್ಕಿದ್ದು ಸೆಲ್ಫಿ ಮಾತ್ರ..!

#

The Terrorist Movie Gallery

Thayige Thakka Maga Movie Gallery