` ಮತ್ತೊಮ್ಮೆ ತಮಿಳಿನತ್ತ ಶುಭಾ ಪೂಂಜಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shubha punja's re entry to tamil films
Shubha Punja Image

ಜಯಮಹಲ್. ಶುಭಾ ಪೂಂಜಾ ನಾಯಕಿಯಾಗಿರುವ ಚಿತ್ರ. ಇದೇ ವಾರ ತೆರೆಗೆ ಬರುತ್ತಿರುವ ಈ ಸಿನಿಮಾ, ತಮಿಳಿನಲ್ಲಿ ಮಾತಂಗಿ ಹೆಸರಿನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ 10 ವರ್ಷಗಳ ನಂತರ ಮತ್ತೊಮ್ಮೆ ಶುಭಾ ಕಾಲಿವುಡ್ ಪ್ರವೇಶಿಸುತ್ತಿರುವುದು ವಿಶೇಷ.

ಶುಭಾ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದವರಾದರೂ, ಅದಕ್ಕೂ ಮೊದಲೇ ತಮಿಳಿನಲ್ಲಿ 2 ಸಿನಿಮಾ ಪೂರೈಸಿದ್ದರು. ಅದಾದ ಮೇಲೆ ಅವಕಾಶಗಳು ಬಂದವಾದರೂ ಯಾಕೋ ಇಷ್ಟವಾಗಲಿಲ್ಲ. ಈಗ ಮಾತಂಗಿ ಮೂಲಕ ಮತ್ತೊಮ್ಮೆ ತಮಿಳಿಗೂ ಹೋಗುತ್ತಿದ್ದೇನೆ. ಕನ್ನಡದಲ್ಲಿ ಜಯಮಹಲ್, ತಮಿಳಿನಲ್ಲಿ ಮಾತಂಗಿ. ಎರಡು ಭಾಷೆಯಲ್ಲೂ ನನ್ನದು ಪ್ರಮುಖ ಪಾತ್ರ ಎಂದು ಖುಷಿಯಾಗಿದ್ದಾರೆ ಶುಭಾ.

ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಹೃದಯಶಿವ. ಚಿತ್ರದಲ್ಲಿ ಅವರೂ ಕೂಡ  ಒಂದು ಪಾತ್ರ ಮಾಡಿದ್ದಾರಂತೆ. ಚಿತ್ರದ ಅತ್ಯಂತ ಪ್ರಮುಖ ಪಾತ್ರದಲ್ಲಿರುವುದು ಶುಭಾ ಹಾಗೂ ನೀನಾಸಂ ಅಶ್ವತ್ಥ್. ಭಯ ಬೀಳೋಕೆ ಸಿದ್ಧರಾಗಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery