ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ದಶಕಗಳ ಚಿತ್ರಜೀವನದಲ್ಲಿ ಕೆಲವೊಂದಿಷ್ಟು ವರ್ಷಗಳನ್ನು ತಮ್ಮದೇ ಎಂಬಂತೆ ಆಳಿದ್ದಾರೆ. ಅದು ತಮ್ಮ ಚಿತ್ರಗಳ ಮೂಲಕ. ಸಕ್ಸಸ್ ಮೂಲಕ. ಈಗ ಮತ್ತೊಮ್ಮೆ 2018 ರವಿಚಂದ್ರನ್ ವರ್ಷವಾಗುವ ಸುಳಿವು ಕೊಟ್ಟಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರವೇ ಆದರೆ, ಈ ವರ್ಷ ರವಿಚಂದ್ರನ್ ಅವರ 4 ಸಿನಿಮಾಗಳು ಬಿಡುಗಡೆಯಾಗಲಿವೆ.
ಚಿರಂಜೀವಿ ಸರ್ಜಾ ಜೊತೆ ನಟಿಸಿರುವ ಸೀಜರ್ ಇದೇ ತಿಂಗಳು ತೆರೆಗೆ ಬರಲಿದೆ. ಅದಾದ ನಂತರ ಬಕಾಸುರ ಕ್ಯೂನಲ್ಲಿದೆ. ಈ ಎರಡು ಚಿತ್ರಗಳ ಸರದಿ ಮುಗಿದ ನಂತರ ಕುರುಕ್ಷೇತ್ರದ ಶ್ರೀಕೃಷ್ಣನಾಗಿ ಬೆಳ್ಳಿತೆರೆಯಲ್ಲಿ ರಾರಾಜಿಸಲಿದ್ದಾರೆ ಕ್ರೇಜಿ ಸ್ಟಾರ್. ಇವುಗಳೆಲ್ಲ ಮುಗಿಯುವ ಹೊತ್ತಿಗೆ ರಾಜೇಂದ್ರ ಪೊನ್ನಪ್ಪ ಸಿನಿಮಾ ತೆರೆಗೆ ಬರೋಕೆ ರೆಡಿಯಾಗಿರುತ್ತೆ.
ಇದರ ಜೊತೆಗೆ ಎಂ.ಎಸ್.ರಮೇಶ್ ನಿರ್ದೇಶನದ ದಶರಥ ಚಿತ್ರವೂ ಇದೇ ವರ್ಷ ತೆರೆಕಂಡರೆ ಆಶ್ಚರ್ಯವಿಲ್ಲ. ಹೀಗಾಗಿ ಈ ವರ್ಷ ರವಿಚಂದ್ರನ್ ವರ್ಷವಾಗೋದು ಗ್ಯಾರಂಟಿ.