ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಸಿ.ವಿ.ರಾಜೇಂದ್ರನ್ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಸಿ.ವಿ.ರಾಜೇಂದ್ರನ್ 80ರ ದಶಕದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಡಾ.ರಾಜ್ಕುಮಾರ್, ಶಿವಾಜಿ ಗಣೇಶನ್, ಕಮಲಹಾಸನ್, ವಿಷ್ಣುವರ್ಧನ್, ಶಂಕರ್ನಾಗ್, ಅಂಬರೀಷ್, ರವಿಚಂದ್ರನ್, ಪ್ರಭು ಸೇರಿದಂತೆ.. ಆಗಿನ ಕಾಲದ ಬಹುತೇಕ ಸ್ಟಾರ್ಗಳ ಚಿತ್ರ ನಿರ್ದೇಶಿಸಿದ್ದವರು ರಾಜೇಂದ್ರನ್.
ಕನ್ನಡದಲ್ಲಿ ತ್ರಿಮೂರ್ತಿ ಸಿ.ವಿ.ರಾಜೇಂದ್ರನ್ ನಿರ್ದೇಶನದ ಮೊದಲ ಚಿತ್ರ. ಸಿಂಗಾಪೂರ್ನಲ್ಲಿ ರಾಜಾಕುಳ್ಳ, ಗಲಾಟೆ ಸಂಸಾರ, ಕಿಟ್ಟುಪುಟ್ಟು, ಪ್ರೇಮ ಮತ್ಸರ, ನಾನೇ ರಾಜ, ಪ್ರೀತಿ ಮಾಡು ತಮಾಷೆ ನೋಡು, ಅಳಿಯ ದೇವರು, ಕಮಲಾ, ಉಷಾ, ಸ್ವಯಂವರ, ಘರ್ಜನೆ.. ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದರು.
ತಮಿಳುನಾಡಿನಲ್ಲಿಯೇ ನೆಲೆಸಿದ್ದ ಸಿ.ವಿ.ರಾಜೇಂದ್ರನ್ ಅವರಿಂದ ಕನ್ನಡದಲ್ಲಿ ಹೆಚ್ಚು ಚಿತ್ರ ನಿರ್ದೇಶನ ಮಾಡಿಸಿದ ಹಿರಿಮೆ ದ್ವಾರಕೀಶ್ ಅವರದ್ದು.
Related Articles :-