Print 
duniya vijay, rangayana raghu rachitha ram johnny johnny yes papa,

User Rating: 0 / 5

Star inactiveStar inactiveStar inactiveStar inactiveStar inactive
 
johnny to come with papa
Rangayana Raghu, Duniya Vijay Image

ಜಾನಿ ಜಾನಿ ಯೆಸ್ ಪಾಪಾ ಸಿನಿಮಾ ರಿಲೀಸಾಗುತ್ತಿದೆ. ಇದು ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್‍ನ ಸೀಕ್ವೆಲ್ ಎಂದರೂ ತಪ್ಪೇನಿಲ್ಲ. ವಿಜಯ್-ರಮ್ಯಾ-ರಂಗಾಯಣ ರಘು-ಪ್ರೀತಂ ಗುಬ್ಬಿ ಕಾಂಬಿನೇಷನ್‍ನ ಆ ಸಿನಿಮಾ ಸೂಪರ್ ಹಿಟ್. ಈಗ ಅದೇ ಜೋಡಿ.. ರಿಪೀಟ್ ಆಗಿದೆ. ಪದ್ಮಾವತಿ ಜಾಗಕ್ಕೆ ಹೊಸ ಪದ್ಮಾವತಿಯಾಗಿ ಬಂದಿರೋದು ರಚಿತಾ ರಾಮ್.

ಎಲ್ಲ ಓಕೆ.. ಜಾನಿ ಅಂದ್ರೆ ದುನಿಯಾ ವಿಜಯ್. ಪಾಪಾ ಅಂದ್ರೆ ಯಾರು..? ಅದು ಬೇರ್ಯಾರೂ ಅಲ್ಲ. ರಂಗಾಯಣ ರಘು. ಜಾನಿ ಮೇರಾ ನಾಮ್‍ನಲ್ಲಿ ಸ್ತ್ರೀ ವೇಷ ತೊಟ್ಟು, ದತ್ತಣ್ಣನನ್ನು ಮೋಡಿ ಮಾಡಿದ್ದ ರಘು, ಇಲ್ಲಿ ಪಾಪಾ ಆಗಿದ್ದಾರೆ. ಏನೇನೆಲ್ಲ ತರಲೆ ಮಾಡ್ತಾರೆ ಅನ್ನೋದನ್ನ ನೋಡೋಕೆ, ನೀವು ಥಿಯೇಟರ್‍ಗೇ ಹೋಗಬೇಕು.

ಡಾ.ಹಾಲಪ್ಪ ಅವತಾರದಲ್ಲಿ ಸಾಧು ಮತ್ತೊಮ್ಮೆ ಪ್ರತ್ಯಕ್ಷರಾಗಿದ್ದರೆ, ಹೊಸ ಪದ್ಮಾವತಿಗೂ ಅಪ್ಪನಾಗಿರೋದು ಅಚ್ಯುತ್ ಕುಮಾರ್. ಅಲ್ಲಿ ಶರಣ್, ರಮ್ಯಾಗೆ ಕಾಳು ಹಾಕುವ ಫಾರಿನ್ ಹುಡುಗನಾಗಿದ್ದರು. ಇಲ್ಲಿ ವಿದೇಶಿ ನಟ ಜಾಕ್ ಎಂಬುವವರೇ ಇದ್ದಾರೆ. ಇವರೆಲ್ಲರ ಜೊತೆ ಗಡ್ಡಪ್ಪ ಇದ್ದಾರೆ. ತಿಥಿ ಸ್ಟೈಲ್‍ನಲ್ಲೇ ಇರೋ ಗಡ್ಡಪ್ಪನವರದ್ದು ಸಿನಿಮಾದಲ್ಲಿ ಮುಖ್ಯ ಪಾತ್ರವಂತೆ.