` ಎಲೆಕ್ಷನ್‍ಗೆ ನಿಲ್ತಾರಾ ರಾಧಿಕಾ ಕುಮಾರಸ್ವಾಮಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika kumaraswamya clears air about politics
Radhika Kumaraswamy Image

ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಅಥವಾ ಅದಕ್ಕೂ ಮೊದಲು ಚಿತ್ರರಂಗದ ಹಲವರು ರಾಜಕೀಯ ಪ್ರವೇಶ ಘೋಷಿಸಿದ್ದಾರೆ. ಅಂಥಾದ್ದರಲ್ಲಿ ರಾಧಿಕಾ ಕುಮಾರಸ್ವಾಮಿ ಏನ್ ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಈಗ ಅವುಗಳಿಗೆಲ್ಲ ಫುಲ್‍ಸ್ಟಾಪ್ ಇಟ್ಟಿರುವ ರಾಧಿಕಾ, ರಾಜಕೀಯಕ್ಕೇ ಹೋಗಲ್ಲ ಎಂದುಬಿಟ್ಟಿದ್ದಾರೆ.

ಕೈಲಿ 3 ಸಿನಿಮಾಗಳಿವೆ. ರವಿಚಂದ್ರನ್, ಅರ್ಜುನ್ ಸರ್ಜಾ ಜೊತೆ ನಟಿಸುತ್ತಿದ್ದೇನೆ. ರಮೇಶ್ ನಿರ್ದೇಶನದ ಸಿನಿಮಾದಲ್ಲಿದ್ದೇನೆ. ಇಷ್ಟರ ಮಧ್ಯೆ ಬಿಡುವು ಸಿಕ್ಕರೆ ನನ್ನ ಮಗಳ ಜೊತೆ, ಅಣ್ಣನ ಮಗುವಿನ ಜೊತೆ ಎಂಜಾಯ್ ಮಾಡ್ತೇನೆ. ಇಷ್ಟು ಕೆಲಸಕ್ಕೇ ಬಿಡುವಿಲ್ಲ. ಇನ್ನು ರಾಜಕೀಯಕ್ಕೆ ಯಾಕೆ ಬರಲಿ. ನಾನಿಲ್ಲಿ ಹ್ಯಾಪಿಯಾಗಿದ್ದೇನೆ. ಅಷ್ಟು ಸಾಕು ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

Padarasa Movie Gallery

Kumari 21 Movie Gallery