Print 
r chandru,

User Rating: 0 / 5

Star inactiveStar inactiveStar inactiveStar inactiveStar inactive
 
r chandru's next movie is true love story
R Chandru Image

ತಾಜ್‍ಮಹಲ್ ಚಂದ್ರು...ಚಾರ್‍ಮಿನಾರ್ ಚಂದ್ರು.. ಹೀಗೆ ತಮ್ಮ ಚಿತ್ರಗಳ ಮೂಲಕವೇ ಫೇಮಸ್ಸಾದವರು ಆರ್.ಚಂದ್ರು. ನೈಜ ಪ್ರೇಮಕತೆಗಳನ್ನು ಸೊಗಸಾಗಿ ಚಿತ್ರಿಸುವ ಕಲೆ ಆರ್.ಚಂದ್ರು ಅವರಿಗೆ ಸಿದ್ಧಿಸಿಬಿಟ್ಟಿದೆ. ಈಗ ಮತ್ತೊಮ್ಮೆ ಅಂತಹುದ್ದೇ ಪ್ರೇಮಕತೆಗೆ ಕೈ ಹಾಕಿದ್ದಾರೆ ಆರ್.ಚಂದ್ರು. ಚಿತ್ರದ ಹೆಸರೇ ಐ ಲವ್ ಯೂ. ಎರಡು ಹೃದಯಗಳ ಸಿಗ್ನೇಚರ್ ಅನ್ನೋದು ಟ್ಯಾಗ್‍ಲೈನ್.

ರಾಜ್ ಪ್ರಭಾಕರ್ ಎಂಬುವರು ನಿರ್ಮಾಪಕರಾಗಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ಸಿದ್ಧವಾಗಲಿದೆ. ಎರಡೂ ಭಾಷೆಯಲ್ಲಿ ಕಲಾವಿದರ ಹುಡುಕಾಟ ನಡೆಯುತ್ತಿದೆ. ಆರ್.ಚಂದ್ರು.. ಮತ್ತೊಮ್ಮೆ ಲವ್ವಲ್ಲಿ ಬಿದ್ದಿದ್ದಾರೆ. ಇದು ಸಿನಿಮಾ ಲವ್ವು.