` ನೋ ಲಾಜಿಕ್.. ಓನ್ಲಿ ನಗು ಟಾನಿಕ್.. ಜಾನಿ ಮ್ಯಾಜಿಕ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
johnny johnny is a complete riot
Duniya Vijay, Rachitha Ram Image

ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಸ್ಪೆಷಲ್ ಏನು..? ಕಾಮಿಡಿ. ಕಾಮಿಡಿ ಬಿಟ್ಟರೆ ಬೇರೆ ಏನಿದೆ..? ಕಾಮಿಡಿಯೇ ಎಲ್ಲ... ಇದರಲ್ಲಿ ನಗುವನ್ನು ಬಿಟ್ಟು ಬೇರೇನೂ ಹುಡುಕಬೇಡಿ. ಲಾಜಿಕ್‍ನ್ನು ಕೂಡಾ ಹುಡುಕಬೇಡಿ. ಇದು ದುನಿಯಾ ವಿಜಯ್ ಹೇಳೋ ಮಾತು.

ಜಾನಿ ಮೇರಾ ನಾಮ್ ಬಂದ 7 ವರ್ಷಗಳ ನಂತರ ಜಾನಿ ಜಾನಿ ಯೆಸ್ ಪಪ್ಪಾ ಬರುತ್ತಿದೆ. ಈ 7 ವರ್ಷಗಳಲ್ಲಿ ಜಾನಿ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಅವನದ್ದೇ ಒಂದು ವೆಬ್‍ಸೈಟ್ ಇದೆ. ಫುಲ್ ಇಂಗ್ಲಿಷ್ ಹೊಡಿತಾನೆ. ಸಖತ್ ಸ್ಟೈಲಿಶ್ ಆಗಿದ್ದಾನೆ. ಅಷ್ಟೇ ಅಲ್ಲ, ಅಲ್ಲಿ ರಮ್ಯಾಗೆ ಕಾಳು ಹಾಕಿದ್ದ ಜಾನಿ, ಇಲ್ಲಿ ರಚಿತಾಗೆ ಗಾಳ ಹಾಕ್ತಾನೆ. 

ಆದರೆ, ಕಾಮಿಡಿಯ ಆಚೆ ಯಾವುದೂ ಹೋಗಲ್ಲ. ಥಿಯೇಟರ್ ಒಳಗೆ ಎಂಟ್ರಿ ಕೊಡುವ ಪ್ರೇಕ್ಷಕ ನಗೋಕೆ ಶುರು ಮಾಡಿದ್ರೆ, ಸಿನಿಮಾ ಮುಗಿಯುವವರೆಗೂ ನಗ್ತಾನೇ ಇರ್ತಾನೆ. ಸ್ಕ್ರಿಪ್ಟ್ ಹಾಗಿದೆ. ಅದರ ಕ್ರೆಡಿಟ್ಟು ಪ್ರೀತಮ್ ಗುಬ್ಬಿದು ಅಂತಾರೆ ವಿಜಯ್.

Geetha Movie Gallery

Ombattane Dikku Launch Meet Gallery