ಮರ್ಯಾದಾ ಪುರುಷೋತ್ತಮ ಶ್ರೀರಾಮನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ ದುನಿಯಾ ವಿಜಯ್. ಇದು ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಒಂದು ದೃಶ್ಯ. ಶ್ರೀರಾಮನವಮಿಗೆ ವಿಶೇಷವಾಗಿ ಈ ಟೀಸರ್ ಕೊಟ್ಟಿರುವ ಚಿತ್ರತಂಡ, ಶ್ರೀರಾಮನವಮಿಯನ್ನು ಈ ಮೂಲಕ ಸಂಭ್ರಮಿಸಿದೆ.
ಇಲ್ಲಿ ದುನಿಯಾ ವಿಜಿ ಶ್ರೀರಾಮನಾದರೆ, ರಂಗಾಯಣ ರಘು ಆಂಜನೇಯ. ಶ್ರೀರಾಮನನ್ನು ವೀರ, ಧೀರ, ಸಿಕ್ಸ್‍ಪ್ಯಾಕ್ ರಾಮ ಎಂದು ಸಂಬೋಧಿಸುವ ರಂಗಾಯಣ ರಘು, ಥೇಟು ಆಂಜನೇಯನೇ.
ದನಕಾಯೋನು ಚಿತ್ರದಲ್ಲಿ ಭಟ್ಟರು, ವಿಜಿಗೆ ಕೃಷ್ಣನ ವೇಷ ತೊಡಿಸಿದ್ದರು. ಈ ಚಿತ್ರದಲ್ಲಿ ಪ್ರೀತಂ ಗುಬ್ಬಿ, ವಿಜಯ್‍ಗೆ ರಾಮನ ವೇಷ ಹಾಕಿಸಿದ್ದಾರೆ. ಇದೇ ಮಾರ್ಚ್ 30ಕ್ಕೆ ಬಿಡುಗಡೆಯಾಗುತ್ತಿರುವ ಸಿನಿಮಾ ಇಂತಹವುಗಳಿಂದಾಗಿಯೇ ಕುತೂಹಲ ಮೂಡಿಸುತ್ತಿದೆ.