` ವಿನೋದ್ ಪ್ರಭಾಕರ್ 8 ಪ್ಯಾಕ್ ಬಾಡಿ ಬಿಲ್ಡಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vinod prabhakar's 8 pack body
Vinod Prabhakar Image

ಟೈಗರ್ ಪ್ರಭಾಕರ್, ಹೆಸರಿಗೆ ತಕ್ಕಂತೆಯೇ ಹುಲಿಯಂತಿದ್ದವರು. ಮಿಸ್ಟರ್ ಮೈಸೂರು ಆಗಿದ್ದ ಪ್ರಭಾಕರ್, ನಂತರ ಬಾಡಿಬಿಲ್ಡಿಂಗ್ ಬಿಟ್ಟು, ಚಿತ್ರರಂಗಕ್ಕೆ ಬಂದರು. ಈಗ ಅವರ ವಿನೋದ್ ಪ್ರಭಾಕರ್ ಸರದಿ.

ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ವಿನೋದ್ ಪ್ರಭಾಕರ್, ಕಟ್ಟುಮಸ್ತಾದ ದೇಹದಾಢ್ರ್ಯವನ್ನೇನೋ ಹೊಂದಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಾಡಿಬಿಲ್ಡ್ ಮಾಡಿದ್ದಾರೆ. ವಿನೋದ್ ಪ್ರಭಾಕರ್ ಅವರದ್ದು ಈಗ 8 ಪ್ಯಾಕ್ ದೇಹ.

ಈ ಹುರಿಗಟ್ಟಿದ ದೇಹವನ್ನು ಅವರು ಸಿದ್ಧಮಾಡಿಕೊಂಡಿರೋದು ರಗಡ್ ಚಿತ್ರಕ್ಕೆ. ಇದರ ಮಧ್ಯೆ ವಿಜಯನಗರದಲ್ಲಿ ಒಂದು ಬಾಡಿಬಿಲ್ಡಿಂಗ್ ಸ್ಪರ್ಧೆ ನಡೆಯಲಿದೆ. ಆ ಸ್ಪರ್ಧೆಯಲ್ಲಿ ಅತಿಥಿಯಾಗಿ ಹೋಗುತ್ತಿರುವ ವಿನೋದ್, ಸ್ಪರ್ಧೆಗಲ್ಲದಿದ್ದರೂ ವೇದಿಕೆಯ ಮೇಲೆ ದೇಹದಾಢ್ರ್ಯ ಪ್ರದರ್ಶನ ಮಾಡುವ ಬಯಕೆಯಲ್ಲಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery