ಜಾನಿ ಜಾನಿ ಯೆಸ್ ಪಪ್ಪಾ.. ಪ್ರೀತಮ್ ಗುಬ್ಬಿ ಸಿನಿಮಾ. ಕಥೆಯನ್ನು ಜಾಲಿ ಮೂಡ್ನಲ್ಲಿಯೇ ಹೇಳೋದು ಪ್ರೀತಮ್ ಸ್ಟೈಲ್. ಜಾನಿ ಜಾನಿ ಕೂಡಾ ಅದೇ ಮಾದರಿಯ ಕಥೆ. ಈ ಚಿತ್ರಕ್ಕೆ ಸಂಗೀತ ನೀಡಿರುವುದು ಅಜನೀಕ್ ಲೋಕನಾಥ್. ಚಿತ್ರಕ್ಕೆ ಸಂಗೀತ ನೀಡುವಾಗ ತಾವು ಎದುರಿಸಿದ ಸವಾಲುಗಳನ್ನೆಲ್ಲ ಅಜನೀಶ್ ಹೇಳಿಕೊಂಡಿದ್ದಾರೆ.
ನಿರ್ದೇಶಕರು ಹೇಳಿದಂತೆ ಚಿತ್ರದ ಪ್ರತಿ ದೃಶ್ಯದಲ್ಲೂ ಕಾಮಿಡಿ ಎಲಿಮೆಂಟ್ ಇರುತ್ತೆ ಎಂದಾಗ, ಹೇಗೆ ಕಂಪೋಸ್ ಮಾಡೋದು ಅನ್ನೋ ಪ್ರಶ್ನೆ ಕಣ್ಣ ಮುಂದೆ ಬಂತು. ನಂತರ, ದುನಿಯಾ ವಿಜಯ್ ಅವರ ಮ್ಯಾನರಿಸಂಗಳಿಗೆ ತಕ್ಕಂತೆ ಬಿಟ್ಸ್ ಹಾಕಿದೆ. ಅದು ಸಿನಿಮಾದಲ್ಲಿ ಚೆನ್ನಾಗಿ ಮೂಡಿ ಬಂದಿದೆ ಎಂದಿದ್ದಾರೆ ಅಜನೀಶ್.
ಇನ್ನು ಅಜನೀಶ್ಗೆ ಈ ಚಿತ್ರದಿಂದಾಗಿ ಗಾಯಕ ಅರ್ಮಾನ್ ಮಲಿಕ್ ಹಾಗೂ ಪುನೀತ್ ರಾಜ್ಕುಮಾರ್ ಅವರಿಂದ ಹಾಡಿಸಿದ ಅನುಭವ ಸಿಕ್ಕಿದೆ. ಪುನೀತ್ ಅವರದ್ದು ಸ್ಪೆಷಲ್ ವಾಯ್ಸ್. ಅವರ ಧ್ವನಿಯಲ್ಲಿ ಹಾಡನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳಿಕೊಂಡಿದ್ದಾರೆ ಅಜನೀಶ್.
ದುನಿಯಾ ವಿಜಯ್, ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಸಿನಿಮಾ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುತ್ತಿದೆ.