` ಸ್ಪರ್ಶ ರೇಖಾ ನಿರ್ಮಾಣದ ಸಿನಿಮಾ ಸ್ಟಾರ್ಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sparsha rekha turns producer
Demo Piece Launch Image

ಸ್ಪರ್ಶ ರೇಖಾ ನಿರ್ಮಾಪಕಿಯಾಗುತ್ತಿದ್ದಾರೆ ಎಂಬ ಸುದ್ದಿ ಹೊಸದೇನಲ್ಲ. ಕೆಲವು ತಿಂಗಳ ಹಿಂದೆಯೇ ತಾವು ಚಿತ್ರ ನಿರ್ಮಾಣಕ್ಕೆ ಇಳಿಯುತ್ತಿರುವುದಾಗಿ ಹೇಳಿಕೊಂಡಿದ್ದರು ರೇಖಾ. ಈಗ ಆ ಚಿತ್ರದ ಚಿತ್ರೀಕರಣ ಶುರುವಾಗಿದೆ.

`ಡೆಮೋಪೀಸ್' ಇದು ರೇಖಾ ನಿರ್ಮಾಣದ ಚಿತ್ರ. ಕಿರುತೆರೆ ಪ್ರತಿಭೆ ಭರತ್ ಚಿತ್ರಕ್ಕೆ ನಾಯಕ. ನಿರ್ದೇಶಕ ವಿವೇಕ್ ಅವರಿಗೂ ಇದು ಮೊದಲ ಸಿನಿಮಾ. ಸೋನಲ್ ನಾಯಕಿಯಾದರೆ, ಚಿತ್ರದಲ್ಲಿ ಖಳನಟನ ಪಾತ್ರ ಮಾಡುತ್ತಿರುವುದು ಚಕ್ರವರ್ತಿ ಚಂದ್ರಚೂಡ್.

ಚಿತ್ರದ ಮುಹೂರ್ತಕ್ಕೆ ನಟ ಯಶ್ ಆಗಮಿಸಿ ಶುಭ ಕೋರಿದ್ದು ವಿಶೇಷವಾಗಿತ್ತು. ನಿರ್ದೇಶಕಿ ಆಗಬೇಕು ಅನ್ನೋದು ನನ್ನ ಕನಸಾಗಿತ್ತು. ಏಕೋ.. ಆಗಲಿಲ್ಲ. ಬಿಗ್‍ಬಾಸ್‍ಗೆ ಹೋಗಿ ಬಂದ ಮೇಲೆ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಹೀಗಿರುವಾಗಲೇ ಈ ಕಥೆ ಸಿಕ್ಕಿತು. ನಿರ್ಮಾಣಕ್ಕೆ ಕೈ ಹಾಕಿದ್ದೇನೆ ಅಂತಾರೆ ರೇಖಾ.

Related Articles :-

'Sparsha' Rekha Turns Producer With 'Demo Piece'

 

Shivarjun Movie Gallery

KFCC 75Years Celebrations and Logo Launch Gallery