Print 
yash, election,

User Rating: 0 / 5

Star inactiveStar inactiveStar inactiveStar inactiveStar inactive
 
yash will not even campaign this elesctions
Yash Image

ಯಶ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ದಿನದಿಂದಲೂ ಎಲ್ಲರೂ ಅವರನ್ನು ಕೇಳುತ್ತಿರುವ ಪ್ರಶ್ನೆಯೇ ಅದು. ನೀವು ರಾಜಕೀಯಕ್ಕೆ ಬರ್ತೀರಾ ಅಂತಾ. ಅದಕ್ಕೆ ಯಶ್ ಹಲವು ಬಾರಿ ನೋ ಎಂದು ಸ್ಪಷ್ಟವಾಗಿ ಉತ್ತರ ಕೊಟ್ಟಾಗಿದೆ. ಈಗ ಯಶ್ ಅವರಿಗೆ ಎದುರಾಗಿರುವ ಪ್ರಶ್ನೆ, ರಾಜಕೀಯಕ್ಕೆ ಬರಲ್ಲ ಓಕೆ, ಪ್ರಚಾರ ಮಾಡ್ತೀರಾ ಅನ್ನೋದು.

ಏಕೆಂದರೆ.. ವಿಷ್ಣುವರ್ಧನ್, ಸುದೀಪ್, ದರ್ಶನ್ ಸೇರಿದಂತೆ ಹಲವರು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿಲ್ಲ. ಆದರೆ, ತಮಗಿಷ್ಟವಾದ ವ್ಯಕ್ತಿಗಳ ಪ್ರಚಾರ ಮಾಡಿದ ಉದಾಹರಣೆಗಳಿವೆ. ಹೀಗಾಗಿಯೇ ಯಶ್ ಅವರಿಗೂ ಇಂಥಾದ್ದೊಂದು ಪ್ರಶ್ನೆ ಎದುರಾಗಿದೆ.

ನಾನು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರ ಮಾಡಲ್ಲ. ವ್ಯಕ್ತಿಗಳು ಇಷ್ಟವಾದರೆ, ಒಳ್ಳೆಯವರು ಎನಿಸಿದರೆ ಖಂಡಿತಾ ಮಾಡುತ್ತೇನೆ. ಆದರೆ, ಅಂತಹವರ್ಯಾರೂ ನನಗೆ ವೈಯಕ್ತಿಕವಾಗಿ  ಗೊತ್ತಿಲ್ಲ ಎಂದಿದ್ದಾರೆ ಯಶ್. ಅಲ್ಲಿಗೆ ಯಾರಾದರೂ ನಾಯಕರ ಪರ ಯಶ್ ಪ್ರಚಾರ ಮಾಡಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.