` ಬೆಳ್‍ಬೆಳಗ್ಗೇನೇ ಸ್ಟುಡಿಯೋಗೆ ಹೋಗ್ತಾರೆ ದರ್ಶನ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan dubs for kurukshetra
Darshan In Kurukshetra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಕುರುಕ್ಷೇತ್ರ. ಚಿತ್ರತಂಡ ಹೇಳಿದ್ದಂತೆಯೇ ಎಲ್ಲವೂ ಆಗಿದ್ದರೆ, ಸಿನಿಮಾ ಇಷ್ಟು ಹೊತ್ತಿಗೆ ಥಿಯೇಟರ್‍ನಲ್ಲಿರಬೇಕಿತ್ತು. ಚಿತ್ರದ ಡಬ್ಬಿಂಗ್ ಭಾರಿ ವೇಗವಾಗಿ ನಡೆಯುತ್ತಿದ್ದು, ದರ್ಶನ್ ಅಂತೂ ತಪಸ್ಸಿನಂತೆ ಮಾಡುತ್ತಿದ್ದಾರೆ.

ದರ್ಶನ್ ಮುಂಜಾನೆಯೇ ಎದ್ದು ಸ್ಟುಡಿಯೋಗೆ ಬಂದು ಫ್ರೆಶ್ ವಾಯ್ಸ್‍ನಲ್ಲೆ ಡಬ್ಬಿಂಗ್ ಮಾಡುತ್ತಿರುವುದು ವಿಶೇಷ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಇದೇ ರೀತಿ ಡಬ್ ಮಾಡಿದ್ದ ದರ್ಶನ್, ಕುರುಕ್ಷೇತ್ರ ಚಿತ್ರಕ್ಕೂ ಅದೇ ಮಾದರಿ ಅನುಸರಿಸುತ್ತಿದ್ದಾರೆ.

ಡಬ್ಬಿಂಗ್ ಒಂದು ಹಂತದ  ಕೆಲಸ ಮುಗಿದಿದ್ದು, ಈಗಾಗಲೇ 2ನೇ ಶೆಡ್ಯೂಲ್ ಜಾರಿಯಲ್ಲಿದೆ. 

Mataash Pressmeet Gallery

Mataash Movie Gallery