` ವಿನಯ್ ರಾಜ್‍ಕುಮಾರ್‍ಗೆ ಶರತ್, ರಾಧಿಕಾ ಅಪ್ಪ ಅಮ್ಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vinay rajkumar;'s new movie
Vinay Rajkumar Image

ವಿನಯ್ ರಾಜ್‍ಕುಮಾರ್, ಸದ್ಯಕ್ಕೆ ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ಬ್ಯುಸಿ. ಆ ಚಿತ್ರದಲ್ಲಿ ನಟಿಸುತ್ತಿರುವಾಗಲೇ ಅಪ್ಪ ಅಮ್ಮ ಪ್ರೀತಿ ಎಂಬ ಸಿನಿಮಾ ಓಕೆ ಎಂದಿದ್ದಾರೆ ವಿನಯ್. ಇದುವೇ ನನ್ನ ಪ್ರಪಂಚ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಇದೊಂದು ಪಕ್ಕಾ ಲವ್‍ಸ್ಟೋರಿ ಸಬ್ಜೆಕ್ಟ್ ಸಿನಿಮಾ ಆಗಿದ್ದು, ಶ್ರೀಧರ್ ಎಂಬುವವರು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ನಿರ್ದೇಶಕ ಶ್ರೀಧರ್, ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿದ್ದವರು. ಈ ಚಿತ್ರದಿಂದ ನಿರ್ದೇಶಕರಾಗುತ್ತಿದ್ದಾರೆ. ಮೂರ್ತಿ ಎಂಬುವರು ನಿರ್ಮಾಪಕರಾಗಿರುವ ಚಿತ್ರಕ್ಕೆ, ಜೂಡಾ ಸ್ಯಾಂಡಿ ಸಂಗೀತವಿದೆ. ಶರತ್ ಕುಮಾರ್ ಹಾಗೂ ರಾಧಿಕಾ ವಿನಯ್ ಅವರ ತಂದೆ ತಾಯಿಯ ಪಾತ್ರ ಮಾಡಲಿದ್ದಾರೆ. ಶರತ್ ಕುಮಾರ್ ಹಾಗೂ ರಾಧಿಕಾ ಇಬ್ಬರೂ ಕನ್ನಡದಲ್ಲಿ ನಟಿಸಿದ್ದಾರೆ. ಆದರೆ, ಒಂದೇ ಚಿತ್ರದಲ್ಲಿ ಜೋಡಿಯಾಗಿರಲಿಲ್ಲ. ಈ ಚಿತ್ರದ ಮೂಲಕ ಇಬ್ಬರೂ ಒಟ್ಟಿಗೇ ತೆರೆಯ ಮೇಲೂ ಜೋಡಿಯಾಗುತ್ತಿರುವುದು ವಿಶೇಷ. ಚಿತ್ರಕ್ಕೆ ಇನ್ನೂ ನಾಯಕಿಯ ಆಯ್ಕೆ ಆಗಿಲ್ಲ.

 

Mataash Pressmeet Gallery

Mataash Movie Gallery