` ಎಟಿಎಂ ರಾಕ್ಷಸನ ಮೇಲೊಂದು ಸಿನಿಮಾ ಎಟಿಎಂ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
atm movie is about atm attack
Atm Movie Team

5 ವರ್ಷದ ಹಿಂದೆ ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆಯೊಬ್ಬರ ಮೇಲೆ ರಾಕ್ಷಸನೊಬ್ಬ ಮಚ್ಚು ಬೀಸಿದ್ದ. ಆ ಘಟನೆ ಬೆಂಗಳೂರಿಗರನ್ನಷ್ಟೇ ಅಲ್ಲ, ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿತ್ತು. ವಿಡಿಯೋ, ಫೋಟೋ ಇದ್ದರೂ ಕೂಡಾ 4 ವರ್ಷ ತಲೆತಪ್ಪಿಸಿಕೊಂಡಿದ್ದ ಆ ರಾಕ್ಷಸ, ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಆಕಸ್ಮಿಕವಾಗಿ. ಇನ್ನು ಇವನ ಪತ್ತೆ ಸಾಧ್ಯವಿಲ್ಲ ಎಂದು ಕೇಸ್ ಕ್ಲೋಸ್ ಮಾಡಿದ್ದ ಪೊಲೀಸರಿಗೇ ಶಾಕ್ ಆಗುವಂತೆ, ಆಂಧ್ರಪ್ರದೇಶದಲ್ಲಿ ನ್ಯಾವುದೋ ಕೇಸ್‍ನಲ್ಲಿ ಸಿಕ್ಕಿಬಿದ್ದು, ಈ ಪ್ರಕರಣ ಬಾಯ್ಬಿಟ್ಟಿದ್ದ.

ಸಿನಿಮಾ ಸುದ್ದಿಗಳಿಗೇ ಮೀಸಲಾಗಿರುವ ಚಿತ್ರಲೋಕದಲ್ಲಿ ಈ ಕಥೆ ಏಕೆ ಅಂದ್ರೆ, ಈ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಸಿದ್ಧವಾಗುತ್ತಿದೆ. ಚಿತ್ರದ ಹೆಸರು ಎಟಿಎಂ. ಅಂದ್ರೆ ಅಟೆಂಪ್ಟ್ ಟು ಮರ್ಡರ್.

ಚಿತ್ರದ ನಿರ್ದೇಶಕ ಅಮರ್. ಕಿರುತೆರೆ ನಟ ಚಂದೂ, ಹೇಮಲತಾ, ಶೋಭಿತಾ ಮೊದಲಾದವರು ನಟಿಸಿರುವ ಚಿತ್ರದ ಟ್ರೇಲರ್‍ನ್ನು ಬಿಡುಗಡೆ ಮಾಡಿದ್ದು ಕಿಚ್ಚ ಸುದೀಪ್. ನೈಜ ಕಥೆ ಆಯ್ಕೆ ಮಾಡಿಕೊಂಡಿರುವ ಹೊಸ ಸಿನಿಮಾಗೆ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು, ವಿಭಿನ್ನ ಪ್ರಯತ್ನಗಳು ಸದ್ದು ಮಾಡುತ್ತಿವೆ. ಅದೇ ರೀತಿ ಇಲ್ಲಿಯೂ ಆಗಲಿ ಎಂದು ಹಾರೈಸಿದರು ಸುದೀಪ್.

Geetha Movie Gallery

Damayanthi Teaser Launch Gallery