` ಸ್ಕೂಲು ಬಿಟ್ಟ ಮೇಲೆ ಯೋಗಿ ಬಸ್ ಹತ್ತಿದ್ದು ಯಾವಾಗ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yogi remembers his school days
Yogi Duniya Movie Image

ಲೂಸ್ ಮಾದ ಯೋಗಿಯ ದುನಿಯಾ-2 ರಿಲೀಸಾಗುತ್ತಿದೆ. ಇದೇ ಶುಕ್ರವಾರ. ಇದು ಸುದೀರ್ಘ ಗ್ಯಾಪ್ ನಂತರ ತೆರೆಗೆ ಬರುತ್ತಿರುವ ಯೋಗಿ ಸಿನಿಮಾ. ಈ ಸಿನಿಮಾದಲ್ಲಿ ಯೋಗಿಗೆ ಒಂದು ವಿಶೇಷ ಅನುಭವವೂ ಇದೆ. 

ಯೋಗಿ ಈ ಸಿನಿಮಾದಲ್ಲಿ ಬಸ್‍ನಲ್ಲಿ ಓಡಾಡುವ ವ್ಯಕ್ತಿಯ ಪಾತ್ರ. ಯೋಗಿ ಬಸ್ ಹತ್ತಿದ್ದು ಶಾಲಾ ದಿನಗಳಲ್ಲಿ ಮಾತ್ರ ಅಂತೆ. ಅದಾದ ಮೇಲೆ ಯೋಗಿ ಓಡಾಡಿದ್ದು, ಬೈಕು, ಕಾರುಗಳಲ್ಲಿ. ಏಕೆಂದರೆ, ಅಪ್ಪ ಶ್ರೀಮಂತರಾಗಿದ್ದರು.

ಹೀಗೆ ಸ್ಕೂಲು ದಿನಗಳ ನಂತರ ಬಸ್ಸು ಹತ್ತದೇ ಇದ್ದ ಯೋಗಿ, ಮತ್ತೆ ಬಸ್ ಹತ್ತಿದ್ದು ದುನಿಯಾ-2ನಲ್ಲಿ. ಅದೊಂದು ವಿಶೇಷ ಅನುಭವ ಎಂದು ಹೇಳಿಕೊಂಡಿದ್ದಾರೆ ಯೋಗಿ.

ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಹಿತಾ ಚಂದ್ರಶೇಖರ್, ಅದ್ಭುತ ಕಲಾವಿದೆ. ಅವರಿಂದ ನಾನು ಹಲವಾರು ವಿಷಯ ಕಲಿತೆ ಎನ್ನುವ ಯೋಗಿ, ಈ ಚಿತ್ರ ಗೆದ್ದೇ ಗೆಲ್ಲುತ್ತೆ ಎಂದು ಬೆಟ್ ಕಟ್ಟಿದ್ದಾರೆ.

Padarasa Movie Gallery

Kumari 21 Movie Gallery