` ನಿರ್ಮಾಪಕಿ ಜಯಶ್ರೀದೇವಿ ಬಂಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
producer b jayashridevi arrested
B Jayashridevi Image

ಚಿತ್ರ ನಿರ್ಮಾಪಕಿ ಜಯಶ್ರೀದೇವಿ ಅವರನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. 34 ಲಕ್ಷ ರೂ. ಚೆಕ್​ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಯಶ್ರೀದೇವಿ ಅವರನ್ನು ಬಂಧಿಸಲಾಗಿದೆ. ಆನಂದ್ ಎಂಬುವವರಿಗೆ ಕೊಡಬೇಕಿದ್ದ ಹಣಕ್ಕೆ ಜಯಶ್ರೀದೇವಿ ಚೆಕ್ ಕೊಟ್ಟಿದ್ದರು. ಆದರೆ, ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದ ಆನಂದ್, ಜಯಶ್ರೀದೇವಿ ಅವರಿಂದ ಹಣ ವಾಪಸ್​ಗೆ ಮನವಿ ಸಲ್ಲಿಸಿದ್ದರು.

ಜಯಶ್ರೀದೇವಿ, ಕನ್ನಡದ ಖ್ಯಾತ ನಿರ್ಮಾಪಕಿಯರಲ್ಲಿ ಒಬ್ಬರು. ಅಮೃತವರ್ಷಿಣಿ,  ನಮ್ಮೂರ ಮಂದಾರ ಹೂವೆ, ಹಬ್ಬ, ಸ್ನೇಹಲೋಕ, ವಂದೇಮಾತರಂ, ಪ್ರೇಮರಾಗ ಹಾಡು ಗೆಳತಿ, ಶ್ರೀ ಮಂಜುನಾಥ, ಮುಕುಂದ ಮುರಾರಿ  ಚಿತ್ರಗಳನ್ನು ನಿರ್ಮಿಸಿದ್ದ ಬಿ.ಜಯಶ್ರೀದೇವಿ,   ತೆರೆಗೆ ಬರಬೇಕಿರುವ ಕುರುಕ್ಷೇತ್ರ ಚಿತ್ರದ ಸಹನಿರ್ಮಾಪಕರಾಗಿದ್ದರು.

Padarasa Movie Gallery

Kumari 21 Movie Gallery