` ಶನಿ' ಬಾಲಕ ಅನಾಥ ಹುಡುಗ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kannada shani serial hero
Shani Serial Fame Sunil

ಶನಿ. ಕಿರುತೆರೆಯಲ್ಲಿ ಯಶಸ್ವಿಯಾಗಿ 100 ಎಪಿಸೋಡ್ ಮುಗಿಸಿರುವ ಧಾರಾವಾಹಿ. ಈ ಧಾರಾವಾಹಿಯ ಹೈಲೈಟ್ ಶನಿಯ ಪಾತ್ರ ಮಾಡಿರುವ ಬಾಲಕ ಸುನಿಲ್.  ತನ್ನ ಕಣ್ಣು ಹಾಗೂ ಗಾಂಭೀರ್ಯದಿಂದಲೇ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ಸುನಿಲ್ ಬೆಳೆಯುತ್ತಿರುವುದು ಅನಾಥಾಶ್ರಮದಲ್ಲಿ.

ಚಾಮರಾಜನಗರದಲ್ಲಿ ಕವಿ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜೈದೇವ್, ಒಂದು ಅನಾಥಾಶ್ರಮ ನಡೆಸುತ್ತಿದ್ದಾರೆ. ದೀನಬಂಧು ಆಶ್ರಮದಲ್ಲಿ ಓದುತ್ತಿದ್ದ ಸುನಿಲ್, ಶನಿ ಧಾರಾವಾಹಿಗೆ ಸೆಲೆಕ್ಟ್ ಆದಾಗ ಎಸ್‍ಎಸ್‍ಎಲ್‍ಸಿ ಎಕ್ಸಾಮ್ ಮುಗಿದಿತ್ತು. ಅನಾಥಾಶ್ರಮದವರು ಸುನಿಲ್‍ನಲ್ಲಿನ ಕಲೆ ಗುರುತಿಸಿ, ಯಕ್ಷಗಾನ ತರಬೇತಿ ಕೊಡಿಸಿದ್ದರು. ಉಡುಪಿಯ ಮಣಿಪಾಲದಲ್ಲಿ ಅನಾಥಾಶ್ರಮದವರಿಂದಲೇ ತರಬೇತಿ ಪಡೆಯುತ್ತಿದ್ದ ಸುನಿಲ್, ಅಡಿಷನ್‍ಗೆ ಬಂದಾಗ ಧಾರಾವಾಹಿ ತಂಡದವರ ಕಣ್ಣಿಗೆ ಬಿದ್ದರು. ಸುನಿಲ್ ಜೀವನ ಬದಲಾಯ್ತು.

ಮಹಾರಾಷ್ಟ್ರದ ಗುರ್‍ಗಾಂವ್‍ನಲ್ಲಿ ಧಾರಾವಾಹಿಯ ಶೂಟಿಂಗ್ ನಡೆಯುತ್ತಿದೆ. ತಿಂಗಳಲ್ಲಿ 5 ದಿನ ರೆಸ್ಟ್. ಆಗ ಅನಾಥಾಶ್ರಮಕ್ಕೆ ಬರುತ್ತೇನೆ. ಶನಿಯ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಪಾತ್ರ ಮಾಡುತ್ತಾ ಮಾಡುತ್ತಾ ತಿಳಿದುಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಸುನಿಲ್. ಸದ್ಯಕ್ಕೆ ದೂರಶಿಕ್ಷಣದ ಮೂಲಕ ಪಿಯು ಮಾಡುತ್ತಿರುವ ಸುನಿಲ್, ಕಿರುತೆರೆಯಲ್ಲಿನ ಸೂಪರ್ ಸ್ಟಾರ್ ಎಂದರೆ ತಪ್ಪಾಗಲಿಕ್ಕಿಲ್ಲ.

Mataash Pressmeet Gallery

Mataash Movie Gallery